ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ-ಉಕ್ರೇನ್ ಯುದ್ಧದ ನಡುವೆ, ರಷ್ಯಾಕ್ಕೆ ಒಂದಲ್ಲ ಒಂದು ಎಚ್ಚರಿಕೆ ನೀಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ತಮ್ಮ ಸ್ವರ ಬದಲಾಯಿಸಿದ್ದಾರೆ. ಇದಕ್ಕೆ ಕಾರಣ ರಷ್ಯಾ ಸೇನೆಯ ‘ಬ್ಯೂರೆವೆಸ್ಟಿನಿಕ್’ ಕ್ಷಿಪಣಿಯ ಪರೀಕ್ಷೆ.
ಹೌದು, ಟ್ರಂಪ್ ಹೊಸ ಕ್ಷಿಪಣಿಗಳನ್ನು ಪರೀಕ್ಷಿಸುವ ಬದಲು ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವತ್ತ ಗಮನಹರಿಸುವಂತೆ ಅವರು ಪುಟಿನ್ ಅವರನ್ನು ಒತ್ತಾಯಿಸಿದ್ದಾರೆ.
ಏಷ್ಯಾ ಪ್ರವಾಸದ ಸಮಯದಲ್ಲಿ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ,ಪುಟಿನ್ ಯುದ್ಧವನ್ನು ಕೊನೆಗೊಳಿಸಬೇಕು. ಒಂದು ವಾರದಲ್ಲಿ ಕೊನೆಗೊಳ್ಳಬೇಕಿದ್ದ ಈ ಯುದ್ಧವು ಈಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಕ್ಷಿಪಣಿಗಳನ್ನು ಪರೀಕ್ಷಿಸುವ ಬದಲು, ಅವರು ಇದನ್ನು ಮಾಡಬೇಕು ಎಂದು ಸಲಹೆ ನೀಡಿದು.
ವಿಶ್ವದಲ್ಲೇ ಅಚ್ಚರಿ ಮೂಡಿಸುವ ವಿಜ್ಞಾನಿಗಳನ್ನು ಹೊಂದಿರುವ ರಷ್ಯಾ, ಅತ್ಯಂತ ಅಪಾಯಕಾರಿ ಕ್ಷಿಪಣಿಯನ್ನು ಪರೀಕ್ಷಿಸಿರುವುದಾಗಿ ಹೇಳಿಕೊಂಡಿದೆ.ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ವತಃ ಈ ಅಪಾಯಕಾರಿ ಕ್ರೂಸ್ ಪರಮಾಣು ಕ್ಷಿಪಣಿಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿದ್ದಾರೆ. ಈ ಕ್ಷಿಪಣಿ ಎಷ್ಟು ಅಪಾಯಕಾರಿಯೆಂದರೆ ಅದು ಭೂಮಿ ಮತ್ತು ಆಕಾಶವನ್ನು ಮಾತ್ರವಲ್ಲದೆ ಬ್ರಹ್ಮಾಂಡದ ರಹಸ್ಯ ಸ್ಥಳಗಳನ್ನು ಸಹ ಭೇದಿಸಬಲ್ಲದು. ರಷ್ಯಾದ ಈ ಕ್ಷಿಪಣಿ ಅಮೆರಿಕದಿಂದ ಯುರೋಪ್ ವರೆಗೆ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಭೀತಿಯನ್ನು ಸೃಷ್ಟಿಸಿದೆ.
ಇದು ಅನಿಯಮಿತ ವ್ಯಾಪ್ತಿಯನ್ನು ಹೊಂದಿರುವ ವಿಶಿಷ್ಟ ಪರಮಾಣು ಚಾಲಿತ ಕ್ಷಿಪಣಿಯಾಗಿದೆ. ಪುಟಿನ್ ಭಾನುವಾರ ಬ್ಯೂರೆವೆಸ್ಟಿನಿಕ್ ಕ್ರೂಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ಕ್ಷಿಪಣಿಯು ಅನಿಯಮಿತ ದೂರದಲ್ಲಿರುವ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವೆಂದರೆ ಅದು ಯಾವುದೇ ರೀತಿಯ ರಹಸ್ಯ ನೆಲೆಗಳನ್ನು ಹುಡುಕಿ ನಾಶಪಡಿಸಬಹುದು.
ಬ್ಯೂರೆವೆಸ್ಟ್ನಿಕ್ ಕ್ಷಿಪಣಿ ಎಂದರೇನು? ಬ್ಯೂರೆವೆಸ್ಟ್ನಿಕ್ ಕ್ಷಿಪಣಿಯನ್ನು ಮೊದಲು 2018 ರಲ್ಲಿ ಉಡಾಯಿಸಲಾಯಿತು. NATO ಇದಕ್ಕೆ ಸ್ಕೈಫಾಲ್ ಎಂಬ ಸಂಕೇತನಾಮ ನೀಡಿದೆ. ಇದು ಪರಮಾಣು ರಿಯಾಕ್ಟರ್‌ನಿಂದ ಚಾಲಿತವಾಗಿದ್ದು, ಉಡಾವಣೆಯ ನಂತರ ಘನ-ಇಂಧನ ಬೂಸ್ಟರ್‌ಗಳಿಂದ ಚಾಲಿತವಾಗಿದೆ. ಇದು 10,000 ರಿಂದ 20,000 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತದೆ, ಅಂದರೆ ಇದು ರಷ್ಯಾದ ಎಲ್ಲಿಂದಲಾದರೂ ಅಮೆರಿಕವನ್ನು ತಲುಪಬಹುದು.
ಪ್ರಪಂಚದಾದ್ಯಂತದ ಅತ್ಯಂತ ಸುರಕ್ಷಿತ ಸ್ಥಳಗಳು ಸಹ ಈಗ ಈ ಅಪಾಯಕಾರಿ ರಷ್ಯಾದ ಕ್ಷಿಪಣಿಗೆ ಗುರಿಯಾಗುತ್ತೆ. ವಿಶ್ವದ ಬೇರೆ ಯಾವುದೇ ದೇಶವು ಅಂತಹ ಕ್ಷಿಪಣಿಯನ್ನು ಹೊಂದಿಲ್ಲ ಎಂದು ಪುಟಿನ್ ಹೇಳಿದ್ದಾರೆ.
ಒಂದು ಕ್ಷಿಪಣಿ 15 ಗಂಟೆಗಳಲ್ಲಿ 14,000 ಕಿಲೋಮೀಟರ್‌ಗಳನ್ನು ಕ್ರಮಿಸಿದರೆ, ಅದರ ಸರಾಸರಿ ವೇಗ ಗಂಟೆಗೆ ಸರಿಸುಮಾರು 933 ಕಿಲೋಮೀಟರ್‌ಗಳಾಗಿರುತ್ತದೆ. ಇದು ಸಬ್‌ಸಾನಿಕ್ ವಿಮಾನದ ವೇಗವಾಗಿದೆ. ಆದ್ದರಿಂದ, ದೂರ ಮತ್ತು ಸಮಯದ ಆಧಾರದ ಮೇಲೆ, ಕ್ರೂಸ್ ಮಾದರಿಯ ಕ್ಷಿಪಣಿಯು ಸಾಕಷ್ಟು ದೂರವನ್ನು ಕ್ರಮಿಸುವ ಸಾಧ್ಯತೆಯಿದೆ.

