March 24, 2026
Tuesday, March 24, 2026
spot_img

ಕೋಟಿ ಬೆಲೆಯ ‘ಡಿಫೆಂಡರ್’ ಖರೀದಿಸಿದ ರಚ್ಚು ಬೇಬಿ: ಮೊದಲು ಡ್ರೈವ್ ಮಾಡಿದ್ದು ಯಾರ್ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ರಚಿತಾ ರಾಮ್ ತಮ್ಮ ಬಹುಕಾಲದ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಹೊಸ ಲಕ್ಸುರಿ ಕಾರನ್ನು ಖರೀದಿಸಿ ಮನೆಗೆ ತರಿಸಿಕೊಂಡಿದ್ದಾರೆ.

ಲ್ಯಾಂಬೋರ್ಘಿನಿ ಖರೀದಿಸಿದ್ದಾರೆ ಎಂಬ ಮಾತು ಹರಿದಾಡುತ್ತಿದ್ದರೂ, ವಾಸ್ತವದಲ್ಲಿ ರಚಿತಾ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ತೊಡಗಿಸಿಕೊಂಡಿರುವ ನಟಿ, ಈ ಹೊಸ ಕಾರಿನ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ

ಇದರಲ್ಲೂ ವಿಶೇಷವೆಂದರೆ, ತಮ್ಮ ನೆಚ್ಚಿನ ನಟ ಡಾ. ಶಿವರಾಜ್‌ಕುಮಾರ್ ಅವರಿಂದಲೇ ಕಾರು ಚಾಲನೆ ಮಾಡಿಸಬೇಕು ಎಂಬ ರಚಿತಾ ಆಸೆ ಇತ್ತು. ಅದರಂತೆ, ಶೋ ಸೆಟ್‌ಗೆ ಕಾರನ್ನು ತಂದ ಅವರು, ಶಿವರಾಜ್‌ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲಿ ಈ ಕನಸನ್ನು ನನಸಾಗಿಸಿಕೊಂಡರು.

ಸಿನಿಮಾ ಕ್ಷೇತ್ರದಲ್ಲಿಯೂ ರಚಿತಾ ರಾಮ್ ಬ್ಯುಸಿಯಾಗಿದ್ದು, ಹಲವು ಹೊಸ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !