ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಪಡೆಗಳು ಉಕ್ರೇನ್ ಮೇಲೆ ಆಕ್ರಮಣ ಮುಂದುವರಿಸಿದ್ದು, ಎರಡನೇ ದಿನದ ಕಾರ್ಯಾಚರಣೆಯಲ್ಲಿ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡಿದೆ.
ಇದೀಗ ಸ್ಥಾವರದ ಬಳಿ ವಿಕಿರಣ ಹೊರಸೂಸುವಿಕೆ ಪ್ರಮಾಣ ಹೆಚ್ಚಾಗಿದೆ, ಇದರ ಅಂಕಿ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.
ಇದೀಗ ವಿಕಿರಿಣ ಸಾಮಾನ್ಯ ಮಟ್ಟಕ್ಕಿಂತ 20 ಪಟ್ಟು ಹೆಚ್ಚಾಗಿದೆ ಎಂದು ವಿಕಿರಣ ಮೇಲ್ವಿಚಾರಣಾ ಕೇಂದ್ರಗಳು ವರದಿ ಮಾಡಿವೆ. ವಿಕಿರಣ ಸೋರಿಕೆಯಾಗುತ್ತಿದ್ದರೂ ಮತ್ತೊಂದು ದುರಂತ ಅಸಂಭವ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ಥಾವರದ ಬಳಿ ಭಾರೀ ಮಿಲಿಟರಿ ವಾಹನಗಳ ಓಡಾಟದಿಂದ ವಿಕಿರಣ ಸೋರಿಕೆಯಾಗುತ್ತಿದೆ ಎಂದು ಉಕ್ರೇನ್‌ನ ಸ್ಟೇಟ್ ನ್ಯೂಕ್ಲಿಯರ್ ರೆಗ್ಯುಲೇಟರಿ ಇನ್ಸ್‌ಪೆಕ್ಟರೇಟ್ ವರದಿ ಮಾಡಿದೆ.