ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಣಿಪುರದ ಚುರಚಂದಪುರದ ನಿರಾಶ್ರಿತರ ಶಿಬಿರಕ್ಕೆ ತೆರಳಿದ್ದಾರೆ.
ಅಲ್ಲಿರುವ ಮಕ್ಕಳ ಜೊತೆ ಸಾಕಷ್ಟು ಸಮಯ ಕಳೆದಿದ್ದು, ಮಕ್ಕಳನ್ನು ನಗಿಸಿ ತಾವೂ ಇಷ್ಟಪಟ್ಟು ಸಮಯ ಕಳೆದಿದ್ದಾರೆ. ಮಕ್ಕಳ ಜೊತೆಯೇ ಊಟವನ್ನೂ ಮಾಡಿದ್ದಾರೆ.
ಈ ಫೋಟೊಗಳನ್ನು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು,ಪ್ರೀತಿ ಹಾಗೂ ದಯೆ ಯಾವಾಗಲೂ ಹಿಂಸೆಯನ್ನು ಸೋಲಿಸುತ್ತವೆ ಎನ್ನುವ ಕ್ಯಾಪ್ಷನ್ ಹಾಕಿದ್ದಾರೆ.