ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಬ್ಬರು ಸಂಸದರ ವಿರುದ್ಧ ನ್ಯಾಯಾಲಯಕ್ಕೆ ನೀಡಿದ್ದ ಜೀವ ಬೆದರಿಕೆ ದೂರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಿಂದಕ್ಕೆ ಪಡೆದಿದ್ದಾರೆ.
ರಾಹುಲ್ ಒಪ್ಪಿಗೆ ಇಲ್ಲದೆ ಕೋರ್ಟ್‌ನಲ್ಲಿ ಜೀವ ಬೆದರಿಕೆ ದೂರನ್ನು ದಾಖಲಿಸಲಾಗಿದೆ. ನಾಳೆ ಈ ದೂರನ್ನು ವಕೀಲರು ಹಿಂದಕ್ಕೆ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಸುಪ್ರಿಯಾ ಶ್ರೀನಾಥೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೀರ್ ಸಾವರ್ಕರ್ ಅವರ ಸಂಬಂಧಿಯೊಬ್ಬರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯಲ್ಲಿ ರಾಹುಲ್ ಗಾಂಧಿ ಅವರ ವಕೀಲ ಮಿಲಿಂದ್ ಪವಾರ್ ಜೀವಬೆದರಿಕೆ ಸಂಬಂಧ ಪುಣೆ ಕೋರ್ಟ್‌ನಲ್ಲಿ ದೂರು ನೀಡಿದ್ದರು.