ಹೊಸ ದಿಗಂತ ವರದಿ,ರಾಯಚೂರು :
ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ೩೫೩ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಜರಗುತ್ತಿರುಗವ ಸಪ್ತರಾತ್ರೋತ್ಸವದ ಮೊದಲ ದಿನ ಭಾನುವಾರ ಸಂಜೆ ಮಂತ್ರಾಲಯ ಮಠದ ಸುಬುಧೇಂದ್ರ ಸ್ವಾಮೀಜಿ ಧ್ವಜಾರೋಹಣ, ಗೋಪೂಜೆ ಹಾಗೂ ಅಶ್ವಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಯೋಗೀಂದ್ರ ಸಭಾ ಮಂಟಪದಲ್ಲಿ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಶ್ರೀ ಮಠದ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ ನೌಕರರಿಗೆ ಆಶೀರ್ವದಿಸಿದರು. ಬಳಿಕ ಉಂಜಾಳ ಮಂಟಪದಲ್ಲಿ ಧಾನ್ಯ ಪೂಜೆ ನಡೆಯಿತು.