ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು
ರಾಗಿಹಿಟ್ಟು: ಒಂದು ಕಪ್
ಎಣ್ಣೆ: ಕರಿಯಲು
ಎಳ್ಳು: ಅರ್ಧ ಕಪ್
ತೆಂಗಿನ ಪುಡಿ: ಒಂದು ಕಪ್
ಬೆಲ್ಲ: ಒಂದು ಕಪ್
ಮಾಡುವ ವಿಧಾನ:
ಮೊದಲು ಎಳ್ಳನ್ನು ಹುರಿದು ಪಕ್ಕಕ್ಕೆ ಇಡಿ. ಈಗ ಒಲೆಯ ಮೇಲೆ ದಪ್ಪ ಪಾತ್ರೆ ಇಟ್ಟು ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕರಗಿಸಿ. ಬೆಲ್ಲ ಕರಗಿದ ನಂತರ ತೆಂಗಿನ ಪುಡಿ ಸೇರಿಸಿ ಚೆನ್ನಾಗಿ ಕಾಯಿಸಿ ಪಾಕ ಬಂದ ನಂತರ ಎಳ್ಳು ಮತ್ತು ರಾಗಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಹಿಟ್ಟನ್ನು ನಿಂಬೆ ಹಣ್ಣಿನ ಗಾತ್ರದಲ್ಲಿ ತೆಗೆದುಕೊಂಡು ವೃತ್ತಾಕಾರದಲ್ಲಿ ಒತ್ತಿ ಎಣ್ಣೆಯಲ್ಲಿ ಕರಿಯಿರಿ. ಸಿಹಿ ಸಿಹಿ ರಾಗಿ ಕಜ್ಜಾಯ ರೆಡಿ.