ಹೊಸದಿಗಂತ ಡಿಜಿಟಲ್ ಡೆಸ್ಕ್;
ಸ್ಯಾಂಡಲ್‌ವುಡ್ ತುಪ್ಪದ ಬೆಡಗಿ ರಾಗಿಣಿ ಮಲಯಾಳಂ ನಟ ಮೋಹನ್ ಲಾಲ್ ಮನೆಗೆ ಭೇಟಿ ನೀಡಿದ್ದಾರೆ.
ಮೋಹನ್ ಲಾಲ್ ಅವರು ರಾಗಿಣಿ ದ್ವಿವೇದಿ ಹಾಗೂ ಅವರ ತಂಡಕ್ಕೆ ಔತಣ ಕೂಟ ಏರ್ಪಡಿಸಿದ್ದಾರೆ. ಮೋಹನ್ ಲಾಲ್ ತೋರಿಸಿದ ಪ್ರೀತಿಗೆ ರಾಗಿಣಿ ಫಿದಾ ಆಗಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ಮೋಹನ್ ಲಾಲ್ ಜೊತೆಗೆ ತುಪ್ಪದ ಹುಡುಗಿ ರಾಗಿಣಿ ವೃಷಬ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಸದ್ಯ ಕೊನೆಯ ಹಂತದಲ್ಲಿ ನಡೀತಿದೆ.
ಸಿನಿಮಾ ಶೂಟಿಂಗ್ ಮಧ್ಯೆ ಮೋಹನ್ ಲಾಲ್ ಅವರ ಮನೆಗೆ ರಾಗಿಣಿ ಭೇಟಿ ಕೊಟ್ಟಿದ್ದು, ಇಬ್ಬರು ಜೊತೆಗೆ ಭೋಜನ ಸವಿದಿದ್ದಾರೆ.
‘ಅದು ದೊಡ್ಡ ಅಚ್ಚರಿಗಾಗಿ ಕಾದಿರಿ’ ಎಂದು ಅಭಿಮಾನಿಗಳಿಗೆ ರಾಗಿಣಿ ದ್ವಿವೇದಿ ಅವರು ಹೇಳಿದ್ದಾರೆ. ಆ ಮೂಲಕ ಅವರು ಕೌತುಕ ಮೂಡಿಸಿದ್ದಾರೆ. ಮತ್ತೊಮ್ಮೆ ಮೋಹನ್ಲಾಲ್ ಜೊತೆ ಅವರು ಕೈ ಜೋಡಿಸಿದ್ದಾರೆ.