ರಹಾನೆ-ನರೈನ್ ಸ್ಫೋಟಕ ಬ್ಯಾಟಿಂಗ್: ಆರ್‌ಸಿಬಿಗೆ 175 ರನ್‌ಗಳ ಟಾರ್ಗೆಟ್ ನೀಡಿದ ಕೆಕೆಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐಪಿಎಲ್ ನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅಜಿಂಕ್ಯಾ ರಹಾನೆ, ಸುನಿಲ್ ನರೈನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಸಿಡಿಸಿದೆ. ಆ ಮೂಲಕ ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿಗೆ 175 ರನ್‌ಗಳ ಟಾರ್ಗೆಟ್ ನೀಡಿದೆ.

ಆರಂಭೀಕ ಆಟಗಾರ ಡಿ ಕಾಕ್ ಕೇವಲ 4 ರನ್ ಸಿಡಿಸಿ ಔಟ್ ಆದಾಗ ರಹಾನೆ ಜೊತೆಗೂಡಿದ ಇನ್ನೋರ್ವ ಆರಂಭಿಕ ಬ್ಯಾಟರ್ ಸುನಿಲೈ ನರೈನ್ 26 ಎಸೆತಗಳಲ್ಲಿ 44 ರನ್ ಸಿಡಿಸಿದರು. ರಹಾನೆ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ 56 ರನ್ ಸಿಡಿಸಿ ಔಟ್ ಆದರು. ರಿಂಕು ಸಿಂಗ್ (12) ಕೂಡ ಕಡಿಮೆ ರನ್ ಗಳಿಸಿ ಔಟಾದರು.

ವೆಂಕಟೇಶ್ ಅಯ್ಯರ್ 6 ರನ್ ಗಳಿಸಿದರು. ಆಂಡ್ರೆ ರಸೆಲ್ 4 ರನ್ ಗೆ ನಿರ್ಗಮಿಸಿದರು. ಕೆಆರ್ ತಂಡದ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಉತ್ತಮ ಆತ ಆಡಿದರು. 30 ರನ್ ಗಳಿಸಿದರು. ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!