ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸತತ 2ನೇ ದಿನವೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸಿದ್ದು, ನಾಳೆಯು ಬರುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆ 10 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದ ರಾಹುಲ್ ಗಾಂಧಿಯವರು ಇಂದು ಕೂಡ ಸತತ 10 ಗಂಟೆಗಳ ಕಾಲ ವಿಚಾರಣೆಯನ್ನು ಎದುರಿಸಿದ್ದಾರೆ. ಇದೀಗ ಇಡಿವಿಚಾರಣೆ ಮುಗಿಸಿ, ರಾಹುಲ್ ಗಾಂಧಿಯವರು ಕಚೇರಿಯಿಂದ ಹೊರ ಬಂದರು.
ಇನ್ನೂ ನಾಳೆಯೂ ಮತ್ತೆ ವಿಚಾರಣೆಗೆ ಒಳಪಡಿಸಲಾಗುತ್ತದೆ. ನಾಳೆ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ ನಾಳೆ ಮತ್ತೆ ರಾಹುಲ್ ಗಾಂಧಿಯವರು ಇಡಿ ಕಚೇರಿಗೆ ವಿಚಾರಣೆ ಹಾಜರಾಗೋ ಸಾಧ್ಯತೆ ಇದೆ.