ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ: ಅಧಿಕಾರಕ್ಕೆ ಬಂದರೆ ಮೀಸಲಾತಿ ಮಿತಿ ಹೆಚ್ಚಳ ಎಂದ ಕಾಂಗ್ರೆಸ್ ನಾಯಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷವು ಮೀಸಲಾತಿ ಮಿತಿಯನ್ನು ಹೆಚ್ಚಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ.

ಕೊಲ್ಹಾಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ,ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸರ್ಕಾರವು ರಾಜ್ಯದಲ್ಲಿ ಜಾತಿ ಗಣತಿಯನ್ನು ಸಹ ನಡೆಸುತ್ತದೆ. ವಿವಿಧ ಜಾತಿಗಳ ಜನಸಂಖ್ಯೆ ಮತ್ತು ಅವರ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಕೆಲಸ ಮಾಡುತ್ತದೆ. ಇವುಗಳ ಹೊರತಾಗಿ ಮಹಾರಾಷ್ಟ್ರದ ದಲಿತರು ಮತ್ತು ಹಿಂದುಳಿದ ವರ್ಗಗಳ ಸ್ಥಿತಿಗತಿಗಳ ಕುರಿತು ಅಧ್ಯಯನವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

ಯಾವುದೇ ಶಕ್ತಿಯು ಇದನ್ನು ತಡೆಯಲು ಸಾಧ್ಯವಿಲ್ಲ. ಇದನ್ನು ಅಂಗೀಕರಿಸಿ ಕಾನೂನು ರೂಪಿಸಲಾಗುವುದು. ಈ ಹಿಂದೆ ಬಿಜೆಪಿ 400 ಸ್ಥಾನಗಳನ್ನು ದಾಟಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದರು. ಆದರೆ, ದೇಶದ ಜನರು ಅದನ್ನು ಮುಟ್ಟಲು ಬಿಡಲಿಲ್ಲ. ಆ ನಂತರ ಅವರು ಸಂವಿಧಾನಕ್ಕೆ ತಲೆಬಾಗಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಜೆಪಿ ಶಿವಾಜಿ ಮಹಾರಾಜರ ಸಿದ್ಧಾಂತವನ್ನು ಅನುಸರಿಸುವುದಿಲ್ಲ. ಅವರು ದಿನದ 24 ಗಂಟೆಯೂ ಸಿದ್ಧಾಂತದ ವಿರುದ್ಧ ಕೆಲಸ ಮಾಡುತ್ತಾರೆ. ಇನ್ನೊಂದೆಡೆ ಸಂವಿಧಾನ ಉಳಿಸುವ ಹೋರಾಟ ನಮ್ಮದು. ಶಿವಾಜಿ ಮಹಾರಾಜರು ತಮ್ಮ ಜೀವನದುದ್ದಕ್ಕೂ ಅನ್ಯಾಯದ ವಿರುದ್ಧ ಹೋರಾಡಿದರು, ಸತ್ಯದ ಹಾದಿಯಲ್ಲಿ ನಡೆಯಲು ಕಲಿಸಿದರು. ಅವರ ಮಾರ್ಗವನ್ನು ಅನುಸರಿಸುವ ಮೂಲಕ ನಾವು ಜನರ ‘ನ್ಯಾಯದ ಹಕ್ಕಿಗಾಗಿ’ ಹೋರಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಶಿವಾಜಿ ಮಹಾರಾಜರ ಪ್ರತಿಮೆ ಕೇವಲ ಪ್ರತಿಮೆಯಾಗಿರದೆ ಒಂದು ಸಿದ್ಧಾಂತವಾಗಿದೆ. ಒಬ್ಬ ವ್ಯಕ್ತಿಯ ಸಿದ್ಧಾಂತ ಮತ್ತು ಕಾರ್ಯಗಳನ್ನು ನಾವು ಪೂರ್ಣ ಹೃದಯದಿಂದ ಬೆಂಬಲಿಸಿದಾಗ ಪ್ರತಿಮೆಯನ್ನು ತಯಾರಿಸಲಾಗುತ್ತದೆ. ಆದರೆ ಬಿಜೆಪಿಗೆ ಶಿವಾಜಿಯ ವಿಚಾರಗಳಲ್ಲಿ ನಂಬಿಕೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!