ಹೊಸದಿಗಂತ ವರದಿ, ವಿಜಯಪುರ:
ರಾಹುಲ್ ಗಾಂಧಿ ತಲೆ ಇಲ್ಲದ ನಾಯಕನಿದ್ದಾನೆ. ಈತನನ್ನು ಹೇಗೆ ದೇಶದ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ ಎನ್ನುವುದು ದೇವರಿಗೆ ಗೊತ್ತು ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಎಂತಹ ನಾಯಕ ?, ರಾಹುಲ್ ಗಾಂಧಿ, ತಂದೆ, ಅಜ್ಜಿ ಒಳ್ಳೆಯ ನಾಯಕರಿದ್ದರು. ರಾಹುಲ್ ಗಾಂಧಿ ಸಣ್ಣ ಹುಚ್ಚ ಹುಡುಗ ಎಂದು ವಾಗ್ದಾಳಿ ನಡೆಸಿದರು.
75 ವರ್ಷ ದೇಶ ಆಡಳಿತ ಮಾಡಿದ ಮನೆತನದವನು, ಈತನಿಗೆ ಡ್ರೆಸ್ ಕೋಡ್ ಸಹ ತಲೆಯಲ್ಲಿ ಇಲ್ಲ. ಸೊಂಟ (ಹೊಕ್ಕಳು) ಕಾಣುವ ಹಾಗೆ ಡ್ರೆಸ್ ಹಾಕ್ಕೊಂಡು ಬರ್ತಾನೆ ಎಂದು ದೂರಿದರು.
ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದೇನೂ ರಾಜಕಾರಣ ಇದೆ ನನಗೆ ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಧರ್ಮಾಧಿಕಾರಿಯವರ ಹೆಸರಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅನಿಸ್ತಾ ಇದೆ ಎಂದರು.