ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತಮ ರಾಜಕಾರಣಿಯಾಗಲು ರಾಹುಲ್ ಗಾಂಧಿ ಇನ್ನೂ ಹೆಚ್ಚಿನ ಹೋಂ ವರ್ಕ್ ಮಾಡಬೇಕು: ನಿರ್ಮಲಾ ಸೀತಾರಾಮನ್
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತದ ಆರ್ಥಿಕತೆಯನ್ನ ಸತ್ತ ಆರ್ಥಿಕತೆ ಎಂದು ಹೇಳಿದ್ದು, ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, “ರಾಹುಲ್ ಗಾಂಧಿಯನ್ನುನಾನು ಸೀರಿಯಸ್ ಆಗಿ ತೆಗೊಳ್ಳಲ್ಲ” ಎಂದರು.
ವಿರೋಧ ಪಕ್ಷದಿಂದ ಬರುವ ಪ್ರತಿಕ್ರಿಯೆಗಳನ್ನು ತಾವು ಗಂಭೀರವಾಗಿ ಪರಿಗಣಿಸಲು ಸಿದ್ಧರಾಗಿದ್ದೇವೆ. ಆದರೆ ರಾಹುಲ್ ಗಾಂಧಿಯವರ ಹೇಳಿಕೆಗಳಲ್ಲಿ ಸರಿಯಾದ ಮಾಹಿತಿಯ ಕೊರತೆ ಎದ್ದು ಕಾಣುತ್ತದೆ . ನೀವು ಈ ದೇಶದಲ್ಲಿ ಬದುಕಿ, ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸುತ್ತಾ, ಭಾರತ ಸತ್ತ ಆರ್ಥಿಕತೆ ಎಂದು ಹೇಳುವುದು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದರು.
ಬಜೆಟ್ ಮಂಡನೆಯ ನಂತರ ಮಾತನಾಡಿದ ಅವರು, ರಾಹುಲ್ಗಿಂತಲೂ ಉತ್ತಮ ವಿರೋಧ ಪಕ್ಷದ ನಾಯಕನ ಅಗತ್ಯ ಈ ದೇಶಕ್ಕಿದೆ. ಜೊತೆಗೆ ಉತ್ತಮ ರಾಜಕಾರಣಿಯಾಗಲು ರಾಹುಲ್ ಇನ್ನೂ ಹೆಚ್ಚಿನ ಹೋಂ ವರ್ಕ್ ಮಾಡಬೇಕು ಎಂದು ಅಭಿಪ್ರಾಯಪಟ್ಟರು.



