ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರನ್ನು ಟೀಕಿಸಬೇಕಿತ್ತು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆಗ್ರಹಿಸಿದರು.
“ಭುಟ್ಟೋ ಒಬ್ಬ ವಿಫಲ ರಾಷ್ಟ್ರದ ಮಂತ್ರಿಯಾಗಿದ್ದು, ಇಡೀ ಪ್ರಪಂಚವು ಭಯೋತ್ಪಾದಕ ರಾಷ್ಟ್ರವೆಂದು ಗುರುತಿಸಲ್ಪಟ್ಟಿದೆ. ಅವರಿಂದ ಇಂಥಹ ವಿಷಯಗಳಲ್ಲದೆ ಇನ್ನೇನು ಊಹಿಸಲು ಸಾಧ್ಯ ಎಂದು ತಿರುಗೇಟು ನೀಡಿದರು.
ದಿವಾಳಿಯಾದ ದೇಶದ ಸಚಿವರು ಹೀಗೆ ಮಾತನಾಡಬಹುದು ಆದರೆ ಇಂತಹ ಮಾತುಗಳಿಗೆ ರಾಹುಲ್ ಗಾಂಧಿಯಂತಹವರಿಗೆ ಈ ವಿಚಾರದಲ್ಲಿ ರಾಷ್ಟ್ರಕ್ಕಿಂತ ರಾಜಕೀಯವೇ ಮುಖ್ಯ ಎಂಬುದು ಸ್ಪಷ್ಟವಾಗುತ್ತದೆ. ಭುಟ್ಟೊ ಅವರನ್ನು ರಾಹುಲ್ ಗಾಂಧಿ ಟೀಕಿಸಬೇಕಿತ್ತು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧದ ಅನಾಗರೀಕ ಹೀಳಿಕೆಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.
ಬಿಲಾವಲ್ ಅವರ ಅಸಂಬದ್ಧ ಹೇಳಿಕೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ MEA ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ಪಾಕಿಸ್ತಾನದ ವಿದೇಶಾಂಗ ಸಚಿವರ ಹತಾಶೆಯು ಭಯೋತ್ಪಾದಕ ಉದ್ಯಮಗಳ ಮಾಸ್ಟರ್‌ಮೈಂಡ್‌ಗಳ ಕಡೆಗೆ ಹೆಚ್ಚು ನಿರ್ದೇಶಿಸಲ್ಪಡುತ್ತದೆ. ಭಯೋತ್ಪಾದನೆಯನ್ನು ತಮ್ಮ ರಾಜ್ಯ ನೀತಿಯ ಭಾಗವನ್ನಾಗಿ ಮಾಡಿಕೊಂಡಿರುವ ತನ್ನ ಸ್ವಂತ ದೇಶದಲ್ಲಿ, ಪಾಕಿಸ್ತಾನವು ತನ್ನದೇ ಆದ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದರು.