ಬಿಹಾರಕ್ಕೆ ಇಂದು ರಾಹುಲ್​ ಗಾಂಧಿ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರಕ್ಕೆ ಇಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಭೇಟಿ ನೀಡಲಿದ್ದಾರೆ. ನಳಂದದಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿರುವ ಅವರು, ಗಯಾಜಿ ಜಿಲ್ಲೆಯ ಹಲವಾರು ಮಹಿಳಾ ಗುಂಪುಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ರಾಹುಲ್​ ಗಾಂಧಿ ಪ್ರವಾಸದಲ್ಲಿ ಗಯಾಜಿ ಪಟ್ಟಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಗೆಹ್ಲೌರ್‌ನಲ್ಲಿರುವ ದಶರಥ್ ಮಾಂಝಿ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ. 1960ರಿಂದ ಎರಡು ದಶಕಗಳ ಕಾಲ ಪರ್ವತವನ್ನು ಕಡಿದು ರಸ್ತೆ ನಿರ್ಮಾಣ ಮಾಡಿದ ‘ಪರ್ವತ ಮನುಷ್ಯ’ ಎಂದೇ ಜನಪ್ರಿಯರಾದ ದಶರಥ್​ ಮಾಂಝಿ ಕುಟುಂಬ ಸದಸ್ಯರನ್ನು ರಾಹುಲ್​ ಭೇಟಿ ಮಾಡಲಿದ್ದಾರೆ.

ನಳಂದದಲ್ಲಿ ರಾಜಗೀರ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ‘ಸಂವಿಧಾನ ಸಮ್ಮೇಳನ’ವನ್ನು ಉದ್ದೇಶಿಸಿ ರಾಹುಲ್ ಗಾಂಧಿ​ ಮಾತನಾಡಲಿದ್ದಾರೆ. ದೆಹಲಿಗೆ ತೆರಳುವ ಮೊದಲು ಬುದ್ಧನ ಪವಿತ್ರ ಸ್ಥಳವಾದ ಬೋಧ್ ಗಯಾದ ಐತಿಹಾಸಿಕ ಮಹಾಬೋಧಿ ಮಹಾವಿಹಾರ ದೇವಾಲಯಕ್ಕೆ ಅವರು ಭೇಟಿ ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!