ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಬ್ಯಾಂಕಾಕ್‌ಗೆ ಹಾರಲು ರಾಹುಲ್‌ ಗಾಂಧಿ ಪ್ಲಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಲೋಕಸಭಾ ಚುನಾವಣೆ ಯ 7 ಹಂತಗಳ ಮತದಾನ ಪೂರ್ಣಗೊಂಡಿದೆ. ನಾಳೆ (ಜೂನ್‌ 4) ಫಲಿತಾಂಶ ಹೊರ ಬೀಳಲಿದೆ. ಇದಕ್ಕೂ ಮುನ್ನ ಜೂನ್‌ 1ರಂದು ಚುನಾವಣೋತ್ತರ ಸಮೀಕ್ಷೆ (Exit Poll) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.

ಇದರಿಂದ ಕಾಂಗ್ರೆಸ್‌ ನಾಯಕತ್ವದ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ . ಈ ಮಧ್ಯೆ ತೀವ್ರ ಮುಖಭಂಗ ಅನುಭವಿಸುವ ಭೀತಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬ್ಯಾಂಕಾಕ್‌ಗೆ ತೆರಳಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ರಾಹುಲ್ ಗಾಂಧಿ (Rahul Gandhi) ಅವರ ಹೆಸರಿನಲ್ಲಿ ಜೂನ್ 5ರಂದು ಬ್ಯಾಂಕಾಕ್‌ಗೆ ಬುಕ್ ಮಾಡಲಾಗಿದೆ ಎನ್ನಲಾದ ವಿಸ್ತಾರಾ ವಿಮಾನದ ಬೋರ್ಡಿಂಗ್ ಪಾಸ್‌ನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸತ್ಯ ತಿಳಿಯಲು ಹೊರಟಾಗ ಅಸಲಿಯತ್ತು ಬೆಳಕಿಗೆ ಬಂದಿದೆ. ಇದು ಹಳೆ ಫೋಟೋ ಆಗಿದ್ದು, ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Image
ಈ ಬೋರ್ಡಿಂಗ್‌ ಪಾಸ್‌ ಸುಮಾರು 5 ವರ್ಷಗಳ ಹಿಂದಿನದ್ದು ಎಂದು ತಿಳಿದು ಬಂದಿದೆ. 2019ರಲ್ಲಿ ಅಜಯ್ ಅವ್ತಾನೆ ಅವರ ಹೆಸರಿನಲ್ಲಿ ಬುಕ್‌ ಮಾಡಲಾದ ಪಾಸ್‌ ಇದಾಗಿದ್ದು, ರಾಹುಲ್‌ ಗಾಂಧಿ ಹೆಸರನ್ನು ಎಡಿಟ್‌ ಮಾಡಿ ಕಿಡಿಗೇಡಿಗಳು ಹಂಚಿಕೊಂಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!