ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಭಾರತ್ ಜೋಡೋ’ ಯಾತ್ರೆ ಭಾಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ , ಭಾನುವಾರದಂದು ಸುರಿಯುತ್ತಿರುವ ಮಳೆಯಲ್ಲಿ ಭಾಷಣ ಮಾಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಡ್ಯದ ಬಂಡಿಪಾಳ್ಯ ಸಮೀಪ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದರು.
Rahul gandhi giving a speech in pouring rain is not the story – that the crowd stayed back despite the rain to listen to him- now THAT is telling. https://t.co/xld0TvHDmT
— Ramya/Divya Spandana (@divyaspandana) October 2, 2022
ಇದೀಗ ಈ ಫೋಟೋವನ್ನು ಮಾಜಿ ಸಂಸದೆ, ನಟಿ ರಮ್ಯಾ ಕೂಡ ಶೇರ್ ಮಾಡಿ, ಸುರಿಯುತ್ತಿರುವ ಮಳೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ ಅಂದಿದ್ದಾರೆ. ಇದಕ್ಕೆಕಾರಣ ಅಂತಹ ಮಳೆಯಲ್ಲೂ ಸಾವಿರಾರು ಸಂಖ್ಯೆಯಲ್ಲಿ ಜನ ಸಹ ತಾಳ್ಮೆಯಿಂದ ಭಾಷಣ ಕೇಳಿಸಿಕೊಳ್ಳುತ್ತಿರುವುದು ಗಮನ ಸೆಳೆದಿದೆ. ಹೀಗಾಗಿ ಇದನ್ನು ಹಂಚಿಕೊಂಡಿರುವ ರಮ್ಯಾ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ಹೊಗಳಿದ್ದಾರೆ.