ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ಪಾಳಯದಲ್ಲಿ ಭಾರೀ ಬದಲಾವಣೆಗಳು ಕಾಣಿಸುತ್ತಿವೆ.
ಇಂದು ಚುರು ಸಂಸದ ರಾಹುಲ್ ಕಸ್ವಾನ್ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಚುರು ಕ್ಷೇತ್ರದ ಟಿಕೆಟ್ ನೀಡಿಲ್ಲದ ಕಾರಣದಿಂದ ಸಿಟ್ಟಾದ ರಾಹುಲ್ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಚುರು ಬದಲಿಗೆ ಪ್ಯಾರಾಲಿಂಪಿಕ್ ಆಟಗಾರ ದೇವೇಂದ್ರ ಜಜಾರಿಯಾ ಅವರನ್ನು ಕಣಕ್ಕಳಿಸಿದೆ.