ಹೊಸದಿಗಂತ ವರದಿ, ಮಂಡ್ಯ :
ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಸಿರುವ ವಾಲ್ಮೀಕಿ ನಿಗಮದಲ್ಲಿ ನಡೆಸಿರುವ ಹಣ ದುರುಪಯೋಗ ಹಾಗೂ ಮೈಸೂರು ಮುಡಾ ಹಗರಣದ ಬಗ್ಗೆ ರಾಹುಲ್‌ಗಾಂಧಿ ಸೌಂಡ್‌ಲೆಸ್ ಆಗಿದ್ದರೆ ಖರ್ಗೆ ವಾಯ್ಸ್‌ಲೆಸ್ ಆಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖರ್ಗೆ ಮತ್ತು ರಾಹುಲ್ ಅಂತಾರಾಷ್ಟ್ರೀಯ ಬೆಳವಣಿಗೆಗಳ ವಿಚಾರವಾಗಿ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ಸರ್ಕ್ರಾ ನಡೆಸಿರುವ ಹಗರಣಗಳ ಬಗ್ಗೆ ಬಾಯೇಬಿಡುವುದಿಲ್ಲ. ಕರ್ನಾಟಕದಲ್ಲಿ ನಡೆದಿರುವ ಹಣದ ಲೂಟಿಯಲ್ಲಿ ಹೈಕಮಾಂಡ್ ಪಾಲೂ ಇದೆ ಎಂದಂತಾಗಿದೆ. ಭ್ರಷ್ಟಾಚಾರಕ್ಕೆ ಕೈಕಮಾಂಡ್ ಬೆಂಬಲವಾಗಿ ನಿಂತಿರುವುದು ಅವರ ವೌನದಿಂದಲೇ ತಿಳಿಯುತ್ತದೆ ಎಂದು ಕುಟುಕಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಬೇಕಾದಕ್ಕೆಲ್ಲಾ ಬಳಸಿಕೊಳ್ಳಬಹುದು ಎಂಬುದಕ್ಕಾಗಿಯೇ ಯೋಜನೆ ರೂಪಿಸಿದರೇ. ಹಾಗಾದರೆ ಆ ಯೋಜನೆ ಇರೋದು ದಲಿತರ ಉದ್ಧಾರಕ್ಕಲ್ಲ. ವಾಲ್ಮೀಕಿ ನಿಗಮ ಇರುವುದು ಆ ಸಮುದಾಯದವರ ಅಭಿವೃದ್ಧಿಗಲ್ಲ. ಯೋಜನೆಗಳ ಹೆಸರಿನಲ್ಲಿ ಇವರು ಕೊಳ್ಳೆ ಹೊಡೆಯುವುದಕ್ಕಾ ಇರೋದು ಎಂದು ಪ್ರಶ್ನಿಸಿದರು.