ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್’ (Bigg Boss) ಸೀಸನ್ 14 ಮೂಲಕ ಗಮನ ಸೆಳೆದ ರಾಹುಲ್ ವೈದ್ಯ (Rahul Vaidya) ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ರಾಹುಲ್ ಪತ್ನಿ ದಿವ್ಯಾ (Divya Parmar) ಸೆ.20ರಂದು ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ.
ಹೆಣ್ಣು ಮಗು ಆಗಮನವಾಗಿರುವ ಬಗ್ಗೆ ನಟ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 14ರಲ್ಲಿ ರಾಹುಲ್-ದಿವ್ಯಾ ಪರಮಾರ್‌ಗೆ ಪ್ರೇಮಾಂಕುರವಾಗಿದ್ದು, 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಿವ್ಯಾ ಕೂಡ ನಟಿಯಾಗಿದ್ದು, ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.