ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮೇಲೆ ಬುಧವಾರ ಆಕ್ರಮಣ ತೀವ್ರಗೊಳಿಸಿರುವ ರಷ್ಯಾ ಪಡೆಗಳು ಖೆರ್ಸನ್ ನಲ್ಲಿರುವ ರೈಲ್ವೇ ನಿಲ್ದಾಣ ಹಾಗೂ ನದಿ ಬಂದರನ್ನು ವಶಕ್ಕೆ ಪಡೆದಿವೆ ಎಂದು ಖರ್ಸನ್ ಮೇಯರ್ ಇಗೊರ್ ಕೊಲಿಹವ್ ಹೇಳಿದ್ದಾರೆ. ಸಿಎನ್‌ಎನ್ ವರದಿಯ ಪ್ರಕಾರ, ರಷ್ಯಾದ ಮಿಲಿಟರಿ ವಾಹನಗಳು ದೊಡ್ಡ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿ ಬಳಿಕ ಖೆರ್ಸನ್ ನಗರವನ್ನು ಪ್ರವೇಶಿಸಿವೆ. ನಗರದ ದಕ್ಷಿಣ ಭಾಗ ಸಂಪೂರ್ಣವಾಗಿ ರಷ್ಯಾ ಪಡೆಗಳ ವಶವಾಗಿದೆ ಎಂದು ತಿಳಿದುಬಂದಿದೆ.