ಸಾಲು ಸಾಲು ಹಬ್ಬಕ್ಕೆ ಡಿಸ್ಕೌಂಟ್‌ ಕೊಟ್ಟ ರೈಲ್ವೆ : ಏನಿದು ಯೋಜನೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗಣೇಶ ಹಬ್ಬ, ದೀಪಾವಳಿ, ನವರಾತ್ರಿ ಸೇರಿದಂತೆ ಸಾಲು ಸಾಲು ಹಬ್ಬಗಳ ಸೀಸನ್ ಆರಂಭಗೊಳ್ಳುತ್ತಿದೆ. ಇದಕ್ಕಾಗಿ ಭಾರತೀಯ ರೈಲ್ವೇ ಇದೀಗ ಪ್ರಯಾಣಿಕರಿಗೆ ರೌಂಡ್ ಟ್ರಿಪ್ ಪ್ಯಾಕೇಜ್ ಘೋಷಿಸಿದೆ.

ವಿಶೇಷ ಅಂದರೆ ಪ್ಯಾಕೇಜ್ ಜೊತೆಗೆ ಟಿಕೆಟ್ ಬುಕಿಂಗ್ ವೇಳೆ ಶೇಕಡಾ 20 ರಷ್ಟು ಡಿಸ್ಕೌಂಟ್ ಆಫರ್ ನೀಡಲಾಗಿದೆ. ರೈಲ್ವೇ ಇಲಾಖೆಯ ಈ ಮಹತ್ವದ ಘೋಷಣೆಯಿಂದ ಹಬ್ಬ ಆಚರಿಸಲು ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸುವ ಜನರಿಗೆ ಈ ಆಫರ್ ಪ್ರಯೋಜನವಾಗಲಿದೆ. ಇಷ್ಟೇ ಅಲ್ಲ ಹಬ್ಬದ ಸೀಸನ್ ವೇಳೆ ಹೆಚ್ಚುವರಿ ರೈಲು ಸೇವೆಯನ್ನು ನೀಡಲಾಗುತ್ತದೆ.

ಈ ವಿಶೇಷ ಆಫರ್ ಮೂಲಕ ಟಿಕೆಟ್ ಬುಕಿಂಗ್ ಮಾಡುವ ಪ್ರಯಾಣಿಕರಿಗೆ ಶೇಕಡಾ 20 ರಷ್ಟು ಡಿಸ್ಕೌಂಟ್ ಸಿಗಲಿದೆ. ಇದಕ್ಕಾಗಿ ಪ್ರಯಾಣಿಕರು ರಿಟರ್ನ್ ಟಿಕೆಟ್ ಬುಕಿಂಗ್ ಮಾಡಿದವರಿಗೆ ಡಿಸ್ಕೌಂಟ್ ಅನ್ವಯವಾಗಲಿದೆ. ಆರಂಭಿಕ ಟಿಕೆಟ್ ಬುಕಿಂಗ್ ಮಾಡುವ ವೇಳೆಯೇ ರಿಟರ್ನ್ ಟಿಕೆಟ್ ಬುಕಿಂಗ್ ಮಾಡಿದವರಿಗೆ ಡಿಸ್ಕೌಂಟ್ ಸಿಗಲಿದೆ.

ಫೆಸ್ಟಿವಲ್ ಸೀಸನ್ ರೌಂಡ್ ಟ್ರಿಪ್ ಪ್ಯಾಕೇಜ್ ಜೊತೆಗೆ ಡಿಸ್ಕೌಂಟ್ ಆಫರ್ ಆಗಸ್ಟ್ 14ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 13 ರಿಂದ ಅಕ್ಟೋಬರ್ 26ರ ವರೆಗೆ ಪ್ರಯಾಣ ಮಾಡುವ ಪ್ರಯಾಣಿಕರು, ಅಥವಾ ಈ ದಿನಾಂಕದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕು ಟಿಕೆಟ್ ಬುಕಿಂಗ್ ಮಾಡುವಾಗ ಈ ಆಫರ್ ಲಭ್ಯವಾಗಲಿದೆ. ಎರಡನೇ ಹಂತದ ಆಫರ್ ಪ್ರಯೋಜ ನವೆಂಬರ್ 17 ರಿಂದ ಡಿಸೆಂಬರ್ 1ರ ವರೆಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ರೌಂಡ್ ಟ್ರಿಪ್ ಹಾಗೂ ಡಿಸ್ಕೌಂಟ್ ಆಫರ್ ಲಭ್ಯವಾಗಲಿದೆ. ಈ ನಿಗದಿತ ಪ್ರಯಾಣದ ವೇಳೆ ಪ್ರಾಯಣ ಮಾಡಲು ಇಚ್ಚಿಸುವ ಪ್ರಯಾಣಿಕರು ಆಗಸ್ಟ್ 14ರಿಂದ ಟಿಕೆಟ್ ಬುಕಿಂಗ್ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!