ಮುಂಬೈ- ಪಂಜಾಬ್ ಮ್ಯಾಚ್ ಆರಂಭಕ್ಕೆ ಮಳೆ ಎಂಟ್ರಿ: ಇಂದಿನ ಪಂದ್ಯ ರದ್ದಾದ್ರೆ ಏನಾಗುತ್ತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಐಪಿಎಲ್ 2025 ರ ಕ್ವಾಲಿಫೈಯರ್-2 ಪಂದ್ಯ ಆಡಲು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ರೆಡಿಯಾಗಿದ್ದು, ಈಗಾಗಲೇ ಟಾಸ್ ಕೂಡ ಗೆದ್ದು ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಆದ್ರೆ ಮುಂಬೈ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಅಹಮದಾಬಾದ್​ನಲ್ಲಿ ಮಳೆ ಸುರಿಯಲಾರಂಭಿಸಿದೆ. ಆರಂಭದಲ್ಲಿ ತುಂತುರ ಮಳೆ ಸುರಿಯುತ್ತಿತ್ತು. ಆದರೆ ಆ ನಂತರ ಮಳೆ ಧಾರಕಾರವಾಗಿ ಮಳೆ ಸುರಿಯಲಾರಂಭಿಸಿದೆ.ಸದ್ಯಕ್ಕೆ ಮ್ಯಾಚ್ ಸ್ಥಗಿತಗೊಂಡಿದ್ದು, ಹೀಗಾಗಿ ಉಭಯ ತಂಡಗಳಲ್ಲಿ ಆತಂಕ ಮನೆ ಮಾಡಿದೆ.

ಈ ಪಂದ್ಯದ ಗೆಲುವು ತಂಡವನ್ನು ಪ್ರಶಸ್ತಿ ಪಂದ್ಯಕ್ಕೆ ಕೊಂಡೊಯ್ಯಲಿದೆ. ಒಂದೆಡೆ ಪಂಜಾಬ್ ತನ್ನ ಕೊನೆಯ ಪಂದ್ಯವನ್ನು ಸೋತರೆ, ಮತ್ತೊಂಡೆ ಮುಂಬೈ ಎಲಿಮಿನೇಟರ್ ಪಂದ್ಯವನ್ನು ಗೆದ್ದು ಬರುತ್ತಿದೆ.

ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ ಕ್ವಾಲಿಫೈಯರ್‌ 2 ಪಂದ್ಯ ರದ್ದಾದ್ರೆ RCBಗೆ ಅದೃಷ್ಟ ಎಂದೇ ಹೇಳಬಹುದು. ಯಾಕಂದ್ರೆ ಇವತ್ತಿನ ಪಂದ್ಯ ರದ್ದಾದ್ರೆ ಐಪಿಎಲ್ ಟೇಬಲ್ ಟಾಪರ್ ಆಗಿರೋ ಪಂಜಾಬ್ ಕಿಂಗ್ಸ್ ನೇರವಾಗಿ ಫೈನಲ್ ತಲುಪಲಿದೆ. ಜೂನ್ 3ರ ಫಿನಾಲೆಯಲ್ಲಿ RCB ವಿರುದ್ಧ ಪಂಜಾಬ್‌ ಕಿಂಗ್ಸ್ ಸೆಣಸಾಡಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!