ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಸೇರಿದಂತೆ ಕರ್ನಾಟಕದ ಸಾಕಷ್ಟು ಕಡೆಗಳಲ್ಲಿ ಒಂದು ವಾರಗಳ ಕಾಲ ಭಾರಿ ಮಳೆಯಾಗಲಿದೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ 19ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 19ರಿಂದ ಕರಾವಳಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.
ವಿಜಯನಗರ, ಶೀವಮೊಗ್ಗ, ಕೊಡಗು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಳಕಲ್, ಗಂಗಾವತಿ, ಗಬ್ಬೂರು, ತಾವರಗೇರಾ, ಸಿದ್ದಾಪುರ, ಶೋರಾಪುರ, ಸೈದಾಪುರ, ಕಿಬ್ಬನಹಳ್ಳಿ, ಕದ್ರಾ, ಹುನಗುಂದ, ಗುಬ್ಬಿ, ದಾವಣಗೆರೆ, ಭದ್ರಾವತಿ, ಆಳಂದ, ಶಿರಾಲಿ, ಶಕ್ತಿನಗರ, ಮಂಕಿ, ಕುಮಟಾ, ಜೇವರ್ಗಿ, ಗುಳೇಗೋಡು, ಗೋಕರ್ಣ, ಗಂಗಾಪುರ, ಚಿತ್ತಾಪುರ, ಚಿಟಗುಪ್ಪದಲ್ಲಿ ಮಳೆಯಾಗಿದೆ.