July 10, 2026
Friday, July 10, 2026
spot_img

WEATHER | ಎಲ್ಲೋ ಕೆಲವು ಜಿಲ್ಲೆಗಳಿಗೆ ಮಾತ್ರ ವರುಣ ದರುಶನ, ಇನ್ನುಳಿದ ಕಡೆ ಅದೇ ಬಿಸಿಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಒಂದೆರಡು ದಿನಗಳಿಂದ ಬೇಸಿಗೆ ಮಳೆ ಬೀಳುತ್ತಿದೆ. ಅಲ್ಲಲ್ಲಿ ಆಲಿಕಲ್ಲು, ಗುಡುಗು ಸಹಿತ ಮಳೆ ಆಗುತ್ತಿದೆ. ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಳೆ ಬೀಳಲಿದ್ದು, ಉಳಿದೆಡೆ ಅದೇ ಉರಿಬಿಸಿಲು ಇರಲಿದೆ.

ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರದಲ್ಲಿ ಮಾತ್ರ ಮಳೆಯಾಗುವ ಸಾಧ್ಯತೆ ಇದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಅಲ್ಲಲ್ಲಿ ಮಾತ್ರ ಮಳೆ ಬೀಳಲಿದೆ.

ಹಲವು ಜಿಲ್ಲೆಗಳಲ್ಲಿ ತೀವ್ರ ಬಿಸಿಲಿರುವ ಕಾರಣ ಜನರು ಮನೆಯಲ್ಲಿರುವುದು ಸೂಕ್ತ. ಅನಾವಶ್ಯಕ ಓಡಾಟ ತಪ್ಪಿಸಿ, ಹೆಚ್ಚು ನೀರು ಹಾಗೂ ಹಣ್ಣು ತರಕಾರಿಯ ಸೇವನೆ ಮಾಡಿ. ಹೊರಗಿನ ಆಹಾರದಿಂದ ದೂರ ಇರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !