ಹೊಸದಿಗಂತ ಡಿಜಿಟಲ್ ಡೆಸ್ಕ್ :
ರಾಜ್ಯ ರಾಜಧಾನಿಯ ಹಲವೆಡೆ ಧಾರಾಕಾರ ಮಳೆ (Rain) ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮಳೆಯಿಂದಾಗಿ ಸುಮಾರು 8 ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ಡೈವರ್ಟ್ ಮಾಡಲಾಗಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ 19 ವಿಮಾನಗಳ ಲ್ಯಾಂಡಿಂಗ್ನಲ್ಲಿ ವ್ಯತ್ಯಯ ಉಂಟಾಗಿದ್ದು, ಬೇರೆ ಏರ್ಪೋರ್ಟ್ಗೆ ಡೈವರ್ಟ್ ಮಾಡಲಾಗಿದೆ.
ಕೆಲ ವಿಮಾನಗಳು ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಜೋಧ್ಪುರ, ಮುಂಬೈ, ರಾಜ್ಕೋಟ್, ದುಬೈ, ಪಾಟ್ನಾ, ಬರೇಲಿ ಮತ್ತು ಇಂದೋರ್ನಿಂದ ಬರುತ್ತಿದ್ದ ವಿಮಾನಗಳನ್ನು ಬೇರೆ ಏರ್ಪೋರ್ಟ್ಗೆ ಕಳುಹಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ತೆರಳಬೇಕಿದ್ದ ವಿಮಾನಗಳಲ್ಲೂ ವ್ಯತ್ಯಯ ಉಂಟಾಗಿದ್ದು, ಮಳೆಯಿಂದಾಗಿ ವಿಮಾನದಲ್ಲೇ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
ಯಲಹಂಕ ಸುತ್ತಮುತ್ತ ಸೇರಿ ಬೆಂಗಳೂರಿನ ಹಲವೆಡೆ ಇಂದು ಕೂಡ ಧಾರಾಕಾರ ಮಳೆ ಆಗಿದೆ. ದ್ವಿಚಕ್ರ ವಾಹನ ಹಾಗೂ ಗೂಡ್ಸ್ ಆಟೋ ಮಳೆ ನೀರಿನಲ್ಲಿ ಮುಳುಗಿವೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಾಗದೆ ಕಾರು ಚಾಲಕರು ಪರದಾಡುವಂತಾಗಿದ್ದು, ರಸ್ತೆ ಕಾಣದೆ ಕಾರುಗಳು ನಿಂತಲ್ಲೆ ನಿಂತಿವೆ. ಬಿರುಗಾಳಿ ಸಹಿತ ಮಳೆಗೆ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳು ನೆಲಕ್ಕುರುಳಿದ್ದು, ದೇವನಹಳ್ಳಿಯಲ್ಲಿ ಒಂದು ಗಂಟೆ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.