April 7, 2026
Tuesday, April 7, 2026
spot_img

ಚಿನ್ನಸ್ವಾಮಿಯಲ್ಲಿ ಸಿಕ್ಸರ್ ಗಳ ಸುರಿಮಳೆ: ಸಿಎಸ್‌ಕೆ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಿಕ್ಸರ್ ಗಳ ಸುರಿಮಳೆಯೇ ಸುರಿದಿದ್ದು, ಭರ್ಜರಿ ಬ್ಯಾಟಿಂಗ್ ನಡೆಸಿದ ಹಾಲಿ ಚಾಂಪಿಯನ್ ಆರ್‌ಸಿಬಿ 3 ವಿಕೆಟ್ ಕಳೆದುಕೊಂಡು 250 ರನ್​ಗಳ ದಾಖಲೆಯ ಮೊತ್ತ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ 28 ರನ್ ಸಿಡಿಸಿ ಔಟಾದರು. ನಂತರ ಸಾಲ್ಟ್ ಅಬ್ಬರದ ಬ್ಯಾಟಿಂಗ್ ಶುರು ಮಾಡಿದ್ದು, ಪಡಿಕ್ಕಲ್ ಹಾಗೂ ಸಾಲ್ಟ್ 56 ರನ್​ಗಳ ಜೊತೆಯಾಟ ನೀಡಿದರು. ಸಾಲ್ಟ್ 46 ರನ್​ಗಳಿಸಿ ಔಟ್ ಆದರು. ನಾಯಕ ಪಾಟೀದಾರ್, ಪಡಿಕ್ಕಲ್ ಜೊತೆಗೂಡಿ 3ನೇ ವಿಕೆಟ್‌ಗೆ 58 ರನ್​ ಸೇರಿಸಿದರು.

ಪಡಿಕ್ಕಲ್ 50 ರನ್​ ಸಿಡಿಸಿ ಅಬ್ಬರಿಸಿದರು. ಬಳಿಕ ಬಂದಟಿಮ್ ಡೇವಿಡ್ಪಾ ಟೀದಾರ್ ಜೊತೆಗೂಡಿ 99 ರನ್​ಗಳ ಜೊತೆಯಾಟ ನಡೆಸಿ ಗರಿಷ್ಠ ಮೊತ್ತ ದಾಖಲಿಸಿದರು. ಪಾಟೀದಾರ್ ಆಜೇಯ 48 ರನ್​ಗಳಿಸಿದರೆ, ಟಿಮ್ ಡೇವಿಡ್ 70 ರನ್​ಗಳಿಸಿ ಅಬ್ಬರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !