ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಕೆಲವು ಏರಿಯಾಗಳಲ್ಲಿ ಬಿಡದೆ ಮಳೆ ಸುರಿಯುತ್ತಿದೆ. ಇನ್ನು ಚಿಕ್ಕಮಗಳೂರು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವು ಅನಾಹುತಗಳು ಸೃಷ್ಟಿಯಾಗಿವೆ. ಇದರ ಜೊತೆಗೆ ಟ್ರಾವೆಲ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅನಾಹುತ ಸಂಭವಿಸುವ ಸ್ಥಳಗಳಲ್ಲಿಯೇ ಜನ ಫೋಟೊಗೆ ಮುಗಿಬಿದ್ದಿದ್ದಾರೆ.
ಚಾರ್ಮಾಡಿ ಘಾಟ್‌ಗಳಲ್ಲಿ ಬಂಡೆಗಳಿಂದ ನೀರು ಹರಿದು ಬೀಳುತ್ತಿದ್ದು, ಪ್ರಕೃತಿ ನೋಡಲು ಕಣ್ಣಿಗೆ ಹಬ್ಬದಂತಿದೆ, ಆದರೆ ಬಂಡೆಏರಿ ಯುವಕರು ಫೋಟೊಗೆ ಮುಗಿಬೀಳುತ್ತಿದ್ದು, ಪೊಲೀಸರಿಗೆ ತಲೆನೋವಾಗಿದೆ. ಸಕಲೇಶಪುರದಲ್ಲಿ ಭಾರೀ ಮಳೆಗೆ ಮನೆ ಕುಸಿದು ಬಿದ್ದಿದ್ದು, ಭಾರೀ ಅನಾಹುತ ಸಂಭವಿಸಿದೆ. ಹಾಸನದಲ್ಲಿಯೂ ಮನೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ ವೃದ್ಧೆ ಮೃತಪಟ್ಟಿದ್ದಾರೆ.
ರಾಜ್ಯದ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಯಾವ್ಯಾವ ರಾಜ್ಯಗಳಲ್ಲಿ ಭಾರೀ ಮಳೆ?
ಉತ್ತರ ಕನ್ನಡ
ದಕ್ಷಿಣ ಕನ್ನಡ
ಉಡುಪಿ
ಚಿಕ್ಕಮಗಳೂರು
( ರೆಡ್ ಅಲರ್ಟ್)
ಬೆಳಗಾವಿ
ಬೀದರ್
ಕಲಬುರಗಿ
ಕೊಡಗು
ಶಿವಮೊಗ್ಗ
(ಆರೆಂಜ್ ಅಲರ್ಟ್)
ಬಾಗಲಕೋಟೆ
ಹಾವೇರಿ
ಕೊಪ್ಪಳ
ರಾಯಚೂರು
ವಿಜಯಪುರ
ಬಳ್ಳಾರಿ
ಚಾಮರಾಜನಗರ
ಹಾಸನ
(ಯೆಲ್ಲೋ ಅಲರ್ಟ್)