ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನ್ಸೂನ್ ಆರಂಭದೊಂದಿಗೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಕೆಲವು ರಾಜ್ಯಗಳಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಮಳೆ ಮತ್ತು ಗುಡುಗು ಸಹಿತ ಮಳೆಯ ಎಚ್ಚರಿಕೆಯನ್ನು ನೀಡಿದೆ.
ತಮಿಳುನಾಡು ತಿರುಪತ್ತೂರು ಜಿಲ್ಲೆ, ವನ್ನಿಯಂಬಾಡಿ, ಜೋಲಾರ್‌ಪೇಟ್, ಅಂಬೂರ್ ಮತ್ತು ಅಲಂಗಾಯಂನಂತಹ ಪ್ರತ್ಯೇಕ ಪ್ರದೇಶಗಳಲ್ಲಿ ಇಂದು ಸಾಧಾರಣ ಮಳೆಯಾಗಿದೆ. ಮಳೆಯ ಕಾರಣ ತಿರುಪತ್ತೂರಿನ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇಂದು ಬೆಳಿಗ್ಗೆ ಕರ್ನಾಟಕದ ಬೆಂಗಳೂರು ಸೇರಿದಂತೆ ಹಲವೆಡೆ ಮಳೆರಾಐ ತಂಪೆರೆದಿದ್ದಾನೆ. ನಗರದಲ್ಲಿ ರಸ್ತೆಗಳಲ್ಲಿ ನೀರು ಸಂಗ್ರಹಗೊಳ್ಳುವ ದೃಶ್ಯಗಳು ಕಂಡುಬಂದವು.
ನೈಋತ್ಯ ಮಾನ್ಸೂನ್ ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಕೇಂದ್ರ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮತ್ತಷ್ಟು ಮುಂದುವರೆಯಲಿದ್ದು, ಹೆಚ್ಚಿನ ಮಳೆ ಮುನ್ಸೂಚನೆ ನೀಡಿದೆ.
ಮಾನ್ಸೂನ್ ವಿಳಂಬದಿಂದಾಗಿ ದಕ್ಷಿಣದ ಕೆಲವು ರಾಜ್ಯಗಳಿಗೆ ಮಳೆಯ ಕೊರತೆ ಉಂಟಾಗಿದೆ ಮತ್ತು ನೈಋತ್ಯ ಮಾನ್ಸೂನ್ ರಾಜ್ಯಗಳಾದ್ಯಂತ ತನ್ನ ದಾರಿಯನ್ನು ಮುಂದುವರೆಸುತ್ತಿರುವುದರಿಂದ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗಿದೆ.