ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಾದ್ಯಂತ ಇಂದಿನಿಂದ ಮೂರ್ನಾಲ್ಕು ದಿನಗಳ ಕಾಲ ಮಳೆ ಕಡಿಮೆಯಾಗಲಿದ್ದು, ಗಣೇಶ ಚತುರ್ಥಿಯಿಂದ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿಯಲ್ಲಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಕ್ಯಾಸಲ್ರಾಕ್, ಕದ್ರಾ, ಗೇರುಸೊಪ್ಪ, ಆಗುಂಬೆ, ಯಲ್ಲಾಪುರ, ಉಡುಪಿ, ಮಂಕಿ, ಲೋಂಡಾ, ಕುಂದಾಪುರ, ಕುಮಟಾ, ಕಮ್ಮರಡಿ, ಹೊನ್ನಾವರ, ಸಿದ್ದಾಪುರ, ಶಿರಾಲಿ, ಕೊಟ್ಟಿಗೆಹಾರ, ಕೊಪ್ಪ, ಖಾನಾಪುರ, ಕಾರವಾರ, ಹುಂಚದಕಟ್ಟೆ, ಗೋಕರ್ಣ, ಶೃಂಗೇರಿ, ಸೋಮವಾರಪೇಟೆ, ಸೈದಾಪುರ, ಪುತ್ತೂರು, ನಿಪ್ಪಾಣಿ, ಮುಂಡಗೋಡು, ಮುಲ್ಕಿ, ಮೂಡುಬಿದಿರೆ, ಜೋಯ್ಡಾ, ಜಯಪುರ, ಹಳಿಯಾಳ, ಗುತ್ತಲ್, ಗೌರಿಬಿದನೂರು, ಧರ್ಮಸ್ಥಳ, ಚಿತ್ತಾಪುರ, ಭಾಗಮಂಡಲ, ಬೆಳ್ತಂಗಡಿ, ಬೆಳಗಾವಿ, ಬನವಾಸಿಯಲ್ಲಿ ಮಳೆಯಾಗಿದೆ.