ಕರಾವಳಿಯನ್ನು ನಡುಗಿಸಿದ ಮಳೆ: ಪುತ್ತೂರಲ್ಲಿ ನಗರಸಭೆಯ ಕಂಪೌಂಡ್ ಕುಸಿತ

ಹೊಸದಿಗಂತ ಪುತ್ತೂರು:

ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಗೆ ಪುತ್ತೂರು ನಗರಸಭೆಯ ಕಾಂಪೌಂಡ್‌ ಗೋಡೆ ಕುಸಿದು ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಗ್ರಾಮ ಚಾವಡಿಯ ಹಿಂಭಾಗದ ಕೋರ್ಟ್ ರಸ್ತೆಯ ಕಾಂಪೌಂಡ್ ಗೋಡೆ ಕುಸಿದು ಪಕ್ಕದಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾಗಳಿಗೆ ಹಾನಿಯಾಗಿದೆ. ಒಟ್ಟು 3 ರಿಕ್ಷಾಗಳಿಗೆ ಹಾನಿಯಾಗಿದ್ದು, ಈ ಪೈಕಿ 2 ರಿಕ್ಷಾಗಳು ತೀವ್ರ ಹಾನಿಗೊಳಗಾಗಿದೆ. ಈ ಘಟನೆ ನಡೆದ ಸಂದರ್ಭ ಪಕ್ಕದಲ್ಲಿ ಯಾರೂ ಇರದೇ ಇರುವುದರಿಂದ ಜೀವ ಹಾನಿ ಸಂಭವಿಸಿಲ್ಲ .

ಪಕ್ಕದಲ್ಲಿ ನಗರಸಭೆಯ ಟ್ರಾನ್ಸ್‌’ಫಾರ್ಮ‌ರ್ ಇದ್ದು, ಕಾಂಪೌಂಡ್ ಬಿದ್ದಾಗ ರಸ್ತೆಗೆ ವಾಲಿಕೊಂಡು ಬಿಟ್ಟಿತ್ತು. ತಕ್ಷಣ ಮೆಸ್ಕಾಂಗೆ ಮಾಹಿತಿ ನೀಡಿ, ಟ್ರಾನ್ಸ್‌’ಫಾರ್ಮ‌ರನ್ನು ಸರಿಪಡಿಸಲಾಯಿತು.

ರಸ್ತೆಗೆ ಬಿದ್ದಿದ್ದ ಕಲ್ಲು, ಮಣ್ಣನ್ನು ಇದೀಗ ತೆರವುಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!