ಹೊಸದಿಗಂತ ಡಿಜಿಟಲ್ ಡೆಸ್ಕ್:
ವರುಣನ ಆರ್ಭಟಕ್ಕೆ ರಾಜಧಾನಿ ದೆಹಲಿ ತತ್ತರಿಸಿದ್ದು, ಐತಿಹಾಸಿಕ ಕೆಂಪುಕೋಟೆಗೂ ಮಳೆನೀರು ನುಗ್ಗಿದೆ.
ಯಮುನಾ ನದಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ದೆಹಲಿಯಲ್ಲಿ ಆತಂಕ ಸೃಷ್ಟಿಯಾಗಿದೆ, ನದಿ ನೀರಿನ ಏರಿಕೆಯಿಂದಾಗಿ ಕೆಂಪು ಕೋಟೆ ಪಕ್ಕದ ರಸ್ತೆಯಲ್ಲಿ ನೀರು ನಿಂತಿದೆ. ಕೆಂಪು ಕೋಟೆಗೆ ನೀರು ನುಗ್ಗಿರುವುದು ಇದೇ ಮೊದಲಾಗಿದೆ.
ಸದ್ಯ ದೆಹಲಿಯ ಸುತ್ತಮುತ್ತ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಯಮುನೆ ತುಂಬಿ ಹರಿಯುತ್ತಿದ್ದು, ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ಹಳೆದೆಹಲಿ ಭಾಗ ಬಹುತೇಕ ಜಲಾವೃತವಾಗಿದೆ.