ಮಳೆಗಾಲದಲ್ಲಿ ಬಟ್ಟೆ ಒರೆಸುವುದು ದೊಡ್ಡ ಸವಾಲು. ಸೂರ್ಯನ ಬೆಳಕು ಕೊರತೆಯೊಂದಿಗೆ ತೇವವಾತಾವರಣ ಬಟ್ಟೆ ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ದುರ್ವಾಸನೆ, ಫಂಗಸ್ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು. ಆದರೆ, ಕೆಲವೊಂದು ಸರಳ ಉಪಾಯಗಳ ಮೂಲಕ ಮಳೆಗಾಲದಲ್ಲೂ ಬಟ್ಟೆಗಳನ್ನು ತ್ವರಿತವಾಗಿ ಒರೆಸಬಹುದು.
ಹ್ಯಾಂಗರ್ ಬಳಸಿ ಗಾಳಿ ಇರುವ ಸ್ಥಳದಲ್ಲಿ ಒಣಗಿಸಿ:
ಬಟ್ಟೆಗಳನ್ನು ಒಳಗಡೆ ಒಣಗಿಸಬೇಕಾದರೆ ಹೆಚ್ಚು ಗಾಳಿಯಾಡುವ ಕೋಣೆಯಲ್ಲಿ ಅಥವಾ ಫ್ಯಾನ್ ಬಳಿ ಹ್ಯಾಂಗರ್ ಬಳಸಿ ಒಣಗಿಸಿ. ಹೀಗಿದ್ದರೆ ಬಟ್ಟೆ ಬೇಗ ಒಣಗುತ್ತದೆ.
ಬಟ್ಟೆಗಳನ್ನು ಚೆನ್ನಾಗಿ ಹಿಂಡಿ
ಬಟ್ಟೆ ತೊಳೆದ ಬಳಿಕ ಕೈಯಿಂದ ಜೋರಾಗಿ ಹಿಂಡಿ ಹೆಚ್ಚು ನೀರು ಹೊರಹಾಕಿ. ಇದರಿಂದ ಒಣಗಲು ಕಡಿಮೆ ಸಮಯ ಹಿಡಿಯುತ್ತದೆ.
ಫ್ಯಾನ್ ಅಥವಾ ಹೀಟರ್ ಬಳಸಿ:
ಫ್ಯಾನ್ ಅಥವಾ ರೂಮ್ ಹೀಟರ್ ಬಳಸಿ ಬಟ್ಟೆಗಳನ್ನು ಒಂದು ಸ್ಥಳದಲ್ಲಿಟ್ಟು ಒಣಗಿಸಬಹುದು. ಇದು ಗಾಳಿಯ ಹರಿವನ್ನು ಹೆಚ್ಚಿಸಿ ತ್ವರಿತ ಒಣಗಲು ಸಹಾಯ ಮಾಡುತ್ತದೆ.
ಸಣ್ಣ ಭಾಗಗಳಾಗಿ ಒರೆಸುವುದು:
ದಪ್ಪ ಬಟ್ಟೆಗಳನ್ನು ಚಿಕ್ಕ ಭಾಗಗಳಲ್ಲಿ ಅಥವಾ ವಿಭಜಿಸಿ ಒಣಗಿಸುವುದು ಉತ್ತಮ. ಉದಾಹರಣೆಗೆ, ಟವಲ್ ಅಥವಾ ಜೆನ್ಸ್ ಅನ್ನು ಎರಡು ಭಾಗಗಳಾಗಿ ಬಿಸಿ ಗಾಳಿಯ ಎದುರು ಹರಡಿದರೆ ಬೇಗ ಒಣಗುತ್ತದೆ.
ಹೇರ್ ಡ್ರೈಯರ್ ಬಳಸಿ:
ಬಟ್ಟೆಗಳನ್ನು ಒಣಗಿಸುವಾಗ ನೀವು ಅನುಸರಿಸಬಹುದಾದ ಮತ್ತೊಂದು ಸರಳ ವಿಧಾನವೆಂದರೆ ಹೇರ್ ಡ್ರೈಯರ್, ಇವು ಬಟ್ಟೆಗಳು ಬೇಗನೆ ಒಣಗುವಂತೆ ಮಾಡುತ್ತದೆ. ಆರು ಗಂಟೆಯೊಳಗೆ ಇದು ನಿಮ್ಮ ಒದ್ದೆ ಬಟ್ಟೆಯನ್ನು ಒಣಗಿಸುತ್ತದೆ. ಆದರೆ ಬಟ್ಟೆಯಿಂದ ಹೇರ್ ಡ್ರೈಯರ್ ಸ್ವಲ್ಪ ದೂರದಲ್ಲಿ ಇಡುವುದು ಉತ್ತಮ. ಇದರಿಂದ ನಿಮ್ಮ ಒದ್ದೆ ಬಟ್ಟೆ ತುಂಬಾ ಬೇಗನೆ ಒಣಗುತ್ತದೆ.