April 6, 2026
Monday, April 6, 2026
spot_img

ಟಿಕೆಟ್ ದರ ಏರಿಸೋದು ಪ್ರೇಕ್ಷಕರ ಮೇಲೆ ಶೋಷಣೆ ಮಾಡೋದಲ್ಲ: ಪವನ್ ಕಲ್ಯಾಣ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಕೆಲವು ದೊಡ್ಡ ಬಜೆಟ್ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಟಿಕೆಟ್ ದರ ಏರಿಕೆ ಹಿನ್ನೆಲೆಯಲ್ಲಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಟ ಪವನ್ ಕಲ್ಯಾಣ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಟಿಕೆಟ್ ದರ ಏರಿಕೆ ಪ್ರೇಕ್ಷಕರ ಮೇಲೆ ಶೋಷಣೆ ಮಾಡುವುದಲ್ಲ ಎಂದು ತಿಳಿಸಿದ್ದಾರೆ. “ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದು ಕಡ್ಡಾಯವಲ್ಲ, ಈಗ ನೆಟ್‌ಫ್ಲಿಕ್ಸ್, ಅಮೇಜಾನ್‌ ಮೊದಲಾದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಆಯ್ಕೆಯೂ ಇದೆ. ನಿರ್ಮಾಪಕರು ಹಾಕಿದ ದೊಡ್ಡ ಮೊತ್ತಕ್ಕೆ ಅನುಗುಣವಾಗಿ ಟಿಕೆಟ್ ದರ ಹೆಚ್ಚಿಸಲಾಗುತ್ತದೆ” ಎಂದು ಅವರು ಹೇಳಿದರು.

ಇದನ್ನೂ ಓದಿ:

ಪವನ್ ಕಲ್ಯಾಣ್ ಕನ್ನಡದ ಬ್ಲಾಕ್‌ಬಸ್ಟರ್ ‘ಕಾಂತಾರ’ ಚಿತ್ರ ಯಶಸ್ಸನ್ನು ಉದಾಹರಣೆಯಾಗಿ ನೀಡಿದ್ದಾರೆ. “ಭಾಷೆ ಅಥವಾ ನಟನ ಹೆಸರು ಆಧರಿಸಿ ತಾರತಮ್ಯ ಮಾಡಬಾರದು. ಪ್ರತಿ ಸಿನಿಮಾಗೆ ತನ್ನ ಅವಕಾಶ ನೀಡಬೇಕು” ಎಂದಿದ್ದಾರೆ.

ಹೀಗಾಗಿ, ರಾಜ್ಯದಲ್ಲಿ ಟಿಕೆಟ್ ದರ ಏರಿಕೆ ನಿಯಂತ್ರಣ ಇಲ್ಲದಿರುವ ಕಾರಣ, ಕೆಲವು ಮಂದಿ ಪ್ರೇಕ್ಷಕರು ಇದನ್ನು ದಬ್ಬಾಳಿಕೆ ಎಂದು ಪರಿಗಣಿಸುತ್ತಿದ್ದಾರೆ. ಆದರೆ ಪವನ್ ಕಲ್ಯಾಣ್ ಅಭಿಪ್ರಾಯದಲ್ಲಿ ಇದು ಚಿತ್ರ ನಿರ್ಮಾಪಕರ ಹೂಡಿಕೆಗೆ ಸಮಾನ ಹಕ್ಕು ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !