ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಾಜ್ ಬಿ ಶೆಟ್ಟಿ ದುಲ್ಕರ್ ಸಲ್ಮಾನ್ಗೆ ನಿರ್ದೇಶನ ಮಾಡ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಈ ಬಗ್ಗೆ ಇಂಟರ್ವ್ಯೂ ಒಂದರಲ್ಲಿ ರಾಜ್ ಮಾತನಾಡಿದ್ದು, ನಾನು ಸ್ಟಾರ್ ಹೀರೋಗಳಿಗೆ ನಿರ್ದೇಶನ ಮಾಡೋದಿಲ್ಲ ಎಂದು ಹೇಳಿದ್ದಾರೆ.
‘ದುಲ್ಕರ್ ಸಲ್ಮಾನ್ ಅವರ ಚಿತ್ರಕ್ಕೆ ನಿರ್ದೇಶನ ಮಾಡ್ತೀರಾ’ ಎಂದು ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಚಾನೆಲ್ ಆ್ಯಂಕರ್ ಅನುಪಮಾ ಚೋಪ್ರಾ ಕೇಳಿದರು. ಇದಕ್ಕೆ ರಾಜ್ ಬಿ. ಶೆಟ್ಟಿ ಇಲ್ಲ ಎನ್ನುವ ಉತ್ತರ ನೀಡಿದ್ದಾರೆ. ‘ನಾನು ಸ್ಟಾರ್ಗಳಿಗೆ ನಿರ್ದೇಶನ ಮಾಡಲ್ಲ. ಅದು ತುಂಬಾನೇ ನೋವಿನ ಪ್ರಕ್ರಿಯೆ. ಸಿನಿಮಾ ನನಗೆ ತುಂಬಾನೇ ವೈಯಕ್ತಿಕ ವಿಷಯ. ನಾನು ಬೇರೆಯವರಿಗೆ ಕಾಯಬೇಕು, ಕೆಲವರು ಇದನ್ನು ಒಪ್ಪಬೇಕು, ಆ ಬಳಿಕ ಓಕೆ ಹೇಳಬೇಕು ಎಂದರೆ ಅದು ಸಾಧ್ಯವಿಲ್ಲ. ನನಗೆ ಹಾಗೆ ಕೆಲಸ ಮಾಡೋಕೆ ಆಗಲ್ಲ’ ಎಂದಿದ್ದಾರೆ ರಾಜ್.