ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಮೌಳಿ ಬಾಹುಬಲಿ ಚಿತ್ರದಿಂದ ದೇಶ ಮತ್ತು RRR ಚಿತ್ರದ ಮೂಲಕ ಇಡೀ ಜಗತ್ತಿನಾದ್ಯಂತ ಮನ್ನಣೆ ಗಳಿಸಿದ್ದು ಗೊತ್ತೇ ಇದೆ. ತಮ್ಮ RRR ಚಿತ್ರದ ಮೂಲಕ ಹಾಲಿವುಡ್ ತಂತ್ರಜ್ಞರು ಮತ್ತು ಉನ್ನತ ನಿರ್ದೇಶಕರನ್ನು ಮೆಚ್ಚಿಸಿದರು. ಆರ್ ಆರ್ ಆರ್ ಚಿತ್ರದಲ್ಲಿನ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ರಾಜಮೌಳಿ ನಿರ್ದೇಶಕ ಎಂಬುದು ಗೊತ್ತೇ ಇದೆ. ಆದರೆ ನಟನಾಗಿ ಹಲವು ಚಿತ್ರಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಎಲ್ಲಾ ಸೆಲೆಬ್ರಿಟಿಗಳು ಸ್ವಲ್ಪ ಸ್ವಲ್ಪ ಖ್ಯಾತಿ ಪಡೆದಾಗ, ಜಾಹೀರಾತುಗಳನ್ನು ಮಾಡಿ ಹಣ ಸಂಗ್ರಹಿಸುತ್ತಿದ್ದಾರೆ. ನಿರ್ದೇಶಕರು ಜಾಹೀರಾತುಗಳಲ್ಲಿ ನಟಿಸುವುದು ತೀರಾ ಅಪರೂಪ. ಆದರೆ ರಾಜಮೌಳಿ ಚೊಚ್ಚಲ ಬಾರಿಗೆ ಜಾಹೀರಾತಿನಲ್ಲಿ ನಟಿಸಲು ಹೊರಟಿದ್ದಾರೆ. ಇತ್ತೀಚೆಗಷ್ಟೇ ರಾಜಮೌಳಿ ಅವರ ಆ್ಯಡ್ ಶೂಟ್ ಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ರಾಜಮೌಳಿ ಸೂಟ್ ಹಾಕಿಕೊಂಡು ಸ್ಟೈಲಾಗಿ ಫೋನ್ ಫ್ಲಿಪ್ ಮಾಡುತ್ತಾ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. Oppo ಫೋನ್‌ನ ಜಾಹೀರಾತನ್ನು ಚಿತ್ರೀಕರಿಸುತ್ತಿದೆ, ರಾಜಮೌಳಿ ಅದರಲ್ಲಿ ನಟಿಸುತ್ತಿದ್ದಾರೆ. ರಾಜಮೌಳಿ Oppo ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ವರದಿಯಾಗಿದೆ. ಇದೀಗ ರಾಜಮೌಳಿ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗಳು ರಾಜಮೌಳಿ ಹೀರೋ ರೀತಿ ಕಾಣ್ತಾರೆ, ನೀವೂ ನಟನೆ ಮಾಡಿ ಎಂದು ಹೊಗಳಿ ಕಮೆಂಟ್ಸ್ ಮಾಡುತ್ತಿದ್ದಾರೆ.