ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ ರಾಜ್ಯ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭವು ಶನಿವಾರ ರಾಜಭವನದಲ್ಲಿ ನಡೆಯಿತು.
ಭಜನ್ ಲಾಲ್ ಶರ್ಮಾ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಕಿರೋಡಿ ಲಾಲ್ ಮೀನಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ಗಜೇಂದ್ರ ಸಿಂಗ್ ಖಿಮ್ಸರ್, ಬಾಬುಲಾಲ್ ಖರಾಡಿ, ಮದನ್ ದಿಲಾವರ್ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಕಲ್ರಾಜ್ ಮಿಶ್ರಾ ಪ್ರಮಾಣ ವಚನ ಬೋಧಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿಯಾದರು.
#WATCH | Rajasthan Chief Minister Bhajanlal Sharma leaves from Raj Bhawan, Jaipur. He paid a courtesy call to Governor Kalraj Mishra. pic.twitter.com/7qKhpG65yJ
— ANI MP/CG/Rajasthan (@ANI_MP_CG_RJ) December 30, 2023