ತಲೈವಾ @ 72: ಸೂಪರ್ ಸ್ಟಾರ್ ಹುಟ್ಟುಹಬ್ಬ ಆಚರಿಸಲು ರಜನಿ ಮನೆ ಮುಂದೆ ಅಭಿಮಾನಿಗಳ ದಂಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ 72ನೇ ಹುಟ್ಟು ಹಬ್ಬದ ಸಂಭ್ರಮ. ನೆಚ್ಚಿನ ನಟನ ಕಂಡು ವಿಶ್‌ ಮಾಡಲು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಸೋಮವಾರ ಚೆನ್ನೈನ ಪೋಯಸ್ ಗಾರ್ಡನ್ ನಿವಾಸದ ಹೊರಗೆ ಜಮಾಯಿಸಿದರು. ಭಾರೀ ಮಳೆ, ಚಳಿ-ಗಾಳಿ ಲೆಕ್ಕಿಸದೆ ಅಭಿಮಾನಿಗಳು ರಜನಿ ಕಾಂತ್‌ ಮನೆ ಮುಂದೆ ಕ್ಯೂ ನಿಂತಿದ್ದಾರೆ. ಆದರೆ, ತಲೈವಾ ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿದ್ದ ಕಾರಣ ನಿರಾಸೆಗೊಂಡರೂ ಅಚ್ಚುಮೆಚ್ಚಿನ ನಟನ ಬಗ್ಗೆ ಘೋಷಣೆಗಳನ್ನು ಕೂಗಿ ಜನ್ಮದಿನದ ಶುಭಾಶಯ ಕೋರಿದರು.

ರಜನಿಕಾಂತ್ ಅಭಿಮಾನಿಗಳು ಹಾಗೇ ಸ್ಟಾರ್‌ ನಟರು ಸಾಮಾಜಿಕ ಜಾಲತಾಣಗಳಲ್ಲಿ ‘ತಲೈವಾ’ ಗೆ ವಿಶ್ ಮಾಡಿದ್ದಾರೆ. ಕ್ರಿಯೇಟಿವ್ ಪೋಸ್ಟರ್‌ಗಳು ಮತ್ತು ವೀಡಿಯೊಗಳ ರೂಪದಲ್ಲಿ ಜನ್ಮದಿನದ ಶುಭಾಶಯಗಳೊಂದಿಗೆ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ ತುಂಬಿ ತುಳುಕಿದೆ.

ಚಲನಚಿತ್ರಗಳಲ್ಲಿನ ತಮ್ಮದೇ ಸ್ಟೈಲ್‌ನಲ್ಲಿ ಜನರನ್ನು ಆಕರ್ಷಿಸುವ ಕಲೆ ಅವರಿಗಿದೆ. ಆ ಸ್ಟೈಲ್‌ ಮೂಲಕವೇ ದೇಶದಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇವರ ನಟನೆಯ ಸಾಧನೆಗಾಗಿ ಭಾರತ ಸರ್ಕಾರವು ಅವರಿಗೆ 2000 ರಲ್ಲಿ ಪದ್ಮಭೂಷಣ, 2016 ರಲ್ಲಿ ಪದ್ಮ ವಿಭೂಷಣ, ಭಾರತದ ಮೂರನೇ ಮತ್ತು ಎರಡನೇ ಅತ್ಯುನ್ನತ ನಾಗರಿಕ ಗೌರವಗಳು ಮತ್ತು 2019 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!