ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ಸೂಪರ್ ಸ್ಟಾರ್ ನಟ ರಜನಿಕಾಂತ್ ಅಬುಧಾಬಿಗೆ ಹಾರಿದ್ದಾರೆ.
ಸದ್ಯ ‘ಜೈ ಭೀಮ್’ ನಿರ್ದೇಶಕನ ಜೊತೆಗಿನ ಸಿನಿಮಾ ಪೂರ್ಣಗೊಳಿಸಿದ ಬೆನ್ನಲ್ಲೇ ಅಬುಧಾಬಿಗೆ ಹಾರಿದ್ದಾರೆ. ಅಲ್ಲಿ ದೇವಸ್ಥಾನವೊಂದರಲ್ಲಿ ತಲೈವಾ ಭೇಟಿ ನೀಡಿದ್ದಾರೆ.
ದೇವಸ್ಥಾನದ ವಿಶೇಷತೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಜೈಲರ್’ ಸೀಕ್ವೆಲ್ ಮತ್ತು ‘ಕೂಲಿ’ ಸಿನಿಮಾವನ್ನು ರಜನಿಕಾಂತ್ ಕೈಗೆತ್ತಿಕೊಳ್ಳಲಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡುತ್ತಿದ್ದಾರೆ.