ರಾಜ್ಯಸಭೆ ಚುನಾವಣೆ: ಹೆಚ್ ಡಿ ರೇವಣ್ಣ ಮತ ಸಿಂಧು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯಸಭೆ ಚುನಾವಣೆಯಲ್ಲಿ ಮತವನ್ನು ತೋರಿಸಿ ಹಾಕಿ ಗೌಪ್ಯ ಮತದಾನದ ನಿಯಮವನ್ನು ಮಾಜಿ ಸಚಿವ ಹೆಚ್ ಡಿ ರೇವಣ್ಣ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ, ಕಾಂಗ್ರೆಸ್ ಮೇಲ್ಮನವಿ ಸಲ್ಲಿಸಿತ್ತು
ಇದೀಗ ಕೇಂದ್ರ ಚುನಾವಣಾ ಆಯೋಗವೂ ಮತವನ್ನು ಸಿಂಧುಗೊಳಿಸಿ ಆದೇಶಿಸಿದೆ.
ಇಂದು ಕಾಂಗ್ರೆಸ್ ಪಕ್ಷದ ಚುನಾವಣಾ ಏಜೆಂಟ್ ಪ್ರಕಾಶ್ ರಾಥೋಡ್ ಅವರು, ಚುನಾವಣಾಧಿಕಾರಿಗೆ ಮತ್ತೊಂದು ಮೇಲ್ಮನವಿ ಪತ್ರವನ್ನು ಸಲ್ಲಿಸಿದ್ದು, ಈ ಪತ್ರದಲ್ಲಿ ಹೆಚ್ ಡಿ ರೇವಣ್ಣ ಅವರು ಸುಪ್ರೀಂ ಕೋರ್ಟ್ ನ ಮತದಾನದ ಗೌಪ್ಯ ನೀತಿಯನ್ನು ಉಲ್ಲಂಘಿಸಿದ್ದಾರೆ. ತಮ್ಮ ಮತವನ್ನು ಹಾಕುವ ಸಂದರ್ಭದಲ್ಲಿ ಬೇರೆಯವರಿಗೆ ತೋರಿಸಿ ಹಾಕಿದ್ದಾರೆ. ಅವರ ನಡೆಯನ್ನು ಕ್ಲೀನ್ ಚೀಟ್ ನೀಡಿದ್ದು ಸರಿಯಲ್ಲ, ಮತ್ತೊಮ್ಮೆ ಪರಿಶೀಲಿಸಿ, ಅವರ ಮತವನ್ನು ಅಸಿಂಧುಗೊಳಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಚುನಾವಣಾಧಿಕಾರಿ ನೀಡಿರುವಂತ ಆದೇಶವನ್ನು ರದ್ದುಗೊಳಿಸುವಂತೆ ಕೋರಿದ್ದರು.
ಇಂದು ಬೆಳಿಗ್ಗೆ ಬಿಜೆಪಿಯ ಪಕ್ಷದಿಂದ ಚುನಾವಣಾಧಿಕಾರಿ ವಿಶಾಲಾಕ್ಷಿಗೆ ಗೌಪ್ಯ ಮತದಾನದ ನಿಯಮವನ್ನು ಹೆಚ್ ಡಿ ರೇವಣ್ಣ ಉಲ್ಲಂಘಿಸಿದ್ದಾರೆ. ಅವರ ಮತವನ್ನು ಅಸಿಂಧುಗೊಳಿಸುವಂತೆ ದೂರು ನೀಡಿದ್ದರು.
ಈ ದೂರು ಸ್ವೀಕರಿಸಿದ್ದ ಚುನಾವಣಾಧಿಕಾರಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತದಾನದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದ್ದಂತ ವೀಡಿಯೋ ಪೂಟೇಜ್ ನೋಡಿದ್ದರು. ಅಲ್ಲಿನ ದೃಶ್ಯಾವಳಿಯಲ್ಲಿ ಎಲ್ಲಿಯೂ ಅವರು ಗೌಪ್ಯ ಮತದಾನದ ನಿಯಮ ಮೀರಿದ್ಧರ ಬಗ್ಗೆ ಸಾಕ್ಷಿ ಲಭ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಹೆಚ್ ಡಿ ರೇವಣ್ಣ ನಿಯಮ ಉಲ್ಲಂಘಿಸಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿ, ಕ್ಲಿನ್ ಚಿಟ್ ನೀಡಿದ್ದರು. ಆದ್ರೇ ಚುನಾವಣಾಧಿಕಾರಿ ಆದೇಶವನ್ನು ಪ್ರಶ್ನಿಸಿ, ಕೇಂದ್ರ ಚುನಾವಣಾ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಪರಿಶೀಲಿಸಿದಂತ ಚುನಾವಣಾ ಆಯೋಗವು, ಇದೀಗ ಹೆಚ್ ಡಿ ರೇವಣ್ಣ ಅವರ ಮತವನ್ನು ಸಿಂಧುಗೊಳಿಸಿ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here