ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಚುನಾವಣೆಗೆ ಗುಜರಾತ್ನಿಂದ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಹಾಗೂ ಮಾಹಾರಾಷ್ಟ್ರದಿಂದ ಇತ್ತಿಚೇಗೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದಿದ್ದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ (Ashok Chavan) ಕಣಕ್ಕಿಳಿದಿದ್ದಾರೆ .
ನಡ್ಡಾ ಅವರು ಪ್ರಸ್ತುತ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಆಡಳಿತವಿರುವ ರಾಜ್ಯದಿಂದ ಏಕೈಕ ಸ್ಥಾನವನ್ನು ಗೆಲ್ಲಲು ಬಿಜೆಪಿಗೆ ಸಂಖ್ಯಾಬಲವಿಲ್ಲದ ಕಾರಣ ನಡ್ಡಾ ಅವರನ್ನು ಈ ಬಾರಿ ಗುಜರಾತ್ನಿಂದ ಕಣಕ್ಕಿಳಿಸಲಿದೆ. ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚವಾಣ್ ಅವರು ನಿನ್ನೆ ತಾನೇ ಬಿಜೆಪಿಗೆ ಸೇರಿದರು. ಇಂದು ಅವರಿಗೆ ಮಹಾರಾಷ್ಟ್ರದಿಂದ ರಾಜ್ಯಸಭಾ ಟಿಕೆಟ್ ನೀಡಲಾಗಿದೆ.
ಬಿಜೆಪಿ ರಾಜ್ಯಸಭಾ ಚುನಾವಣೆಗೆ ಗುಜರಾತ್ನಿಂದ ನಾಲ್ಕು ಜನರನ್ನು ಹಾಗೂ ಮಹಾರಾಷ್ಟ್ರದಿಂದ ಮೂರು ಜನರನ್ನು ಕಣಕ್ಕಿಳಿಸಿದೆ. ಗುಜರಾತ್ನಿಂದ ಜೆಪಿ ನಡ್ಡಾ, ಗೋವಿಂದಭಾಯ್ ಧೋಲಾಕಿಯಾ, ಮಾಯಾಂಕ್ಭಾಯ್ ನಾಯಕ್ ಮತ್ತು ಡಾ ಜಶ್ವಂತ್ಸಿನ್ಹ್ ಪರ್ಮಾರ್, ಮಹಾರಾಷ್ಟ್ರದಿಂದ ಅಶೋಕ್ ಚವಾಣ್, ಮೇಧಾ ಕುಲಕರ್ಣಿ ಮತ್ತು ಡಾ ಅಜಿತ್ ಗೋಪ್ಛಾಡೆ ಆಯ್ಕೆ ಮಾಡಿದೆ.