ಹೊಸದಿಗಂತ ವರದಿ,ಹುಬ್ಬಳ್ಳಿ:
ನಗರದ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಪ್ಯಾರಾಶೂಟರ್ ರಾಕೇಶ ನಿಡಗುಂದಿ ಅವರು ಮೇ ೨೮ ರಿಂದ ಜೂನ್ ೬ ರ ವರೆಗೆ ದಕ್ಷಿಣ ಕೊರಿಯಾದ ಚಾಂಗವಾನನಲ್ಲಿ ನಡೆಯಲಿರುವ ಡಬ್ಲ್ಯೂಎಸ್‌ಪಿಎಸ್ ಪ್ಯಾರಾ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಆರ್ ೧೧೦ ಏರ್ ರೆ-ಲ್ಸ್ ಸ್ಡ್ಯಾಂಡಿಂಗ್ ಮೆನ್ ಎಸ್‌ಎಸ್೧ಬಿ ವಿಭಾಗಗಕ್ಕೆ ಆಯ್ಕೆಯಾಗಿದ್ದಾರೆ.
ಐದು ವರ್ಷದ ಸತತ ಪ್ರಯತ್ನ -ಲವಾಗಿ ರಾಕೇಶ ನಿಡುಗುಂದಿ ಅವರಿಗೆ ವಿಶ್ವಕಪ್‌ನಲ್ಲಿ ಆಡಲು ಅವಕಾಶ ದೊರೆಕಿದೆ. ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ತರಬೇತುದಾರ ಹಾಗೂ ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರ ಅವರ ಮಾರ್ಗದರ್ಶನದಿಂದ ಒಂದು ವರ್ಷದಿಂದ ಸ್ಪೋರ್ಟ್ಸ್ ಅಥಾರಿಟಿ ಆ- ಇಂಡಿಯಾ ನ್ಯಾಷನಲ್ ಎಕ್ಸಲೆಂಟ್ ಸೆಂಟ್ರಲ್‌ಗೆ ಆಯ್ಕೆಯಾಗಿ ಹೊಸದೆಹಲಿಯಲ್ಲಿ ಅಭ್ಯಾಸ ಮಾಡುತ್ತಿದ್ದರು. ರಾಕೇಶ ನಿಡುಗುಂದಿ ಅವರು ೨೦೧೯ ರಿಂದ ರಾಜ್ಯ ಮಟ್ಟದ ಮತ್ತು ರಾಷ್ಟ್ರಮಟ್ಟದಲ್ಲಿ ಕನಿಷ್ಠ ೨೭ ಪದಕವನ್ನು ಪಡೆದಿzರೆ. ಅದರಲ್ಲಿ ೧೧ ಚಿನ್ನ, ೮ ಬೆಳ್ಳಿ, ೮ ಕಂಚಿನ ಪದಕ ಒಳಗೊಂಡಿವೆ.
ಪ್ಯಾರಾ ಕೆಲೋ ಇಂಡಿಯಾ ಗೆಮ್‌ನಲ್ಲಿ ಸಹ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ೨೦೨೪ ಡಿಸೆಂಬರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯ ಅಂಕ -ಬ್ರುವರಿಯಲ್ಲಿ ನಡೆದ ಟ್ರಾವೆಲ್ಸ್ ಅಂಕವನ್ನು ಪರಿಗಣಿಸಿ ಪ್ಯಾರಾ ಒಲಕ್ಕ್ ಕಮಿಟಿ ಆ- ಇಂಡಿಯಾದವರ ಆಯ್ಕೆ ಸಮಿತಿ ಅವರನ್ನು ವಿಶ್ವಕಪ್‌ಗೆ ಆಯ್ಕೆ ಮಾಡಿದೆ. ಈ ವಿಶ್ವಕಪ್ಪಿನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ಪದ ಪಡೆಯಲಿ ಎಂದು ಸ್ಪೋಟ್ಸ ಶೂಟಿಂಗ್ ಅಕಾಡೆಮಿ ಸಂಸ್ಥಾಪಕ ಶಿವಾನಂದ್ ಬಾಲೆಹೊಸೂರ್ ಹಾಗೂ ತರಬೇತುದಾರ ರವಿಚಂದ್ರ ಬಾಲೆಹೊಸೂರ ತಿಳಿಸಿದ್ದಾರೆ.