June 14, 2026
Sunday, June 14, 2026
spot_img

ತ್ರಿಷಾ-ವಿಜಯ್‌ ಮದುವೆಗೆ ಹೋಗಿ, ಪಕ್ಷಕ್ಕೂ ಸೇರ್ತಾರಂತೆ ರಾಖಿ ಸಾವಂತ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಟ ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ನಡುವಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಈ ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡ ನಂತರ ಈ ಚರ್ಚೆ ಮತ್ತಷ್ಟು ಜೋರಾಗಿದೆ.

ಈಗ ಈ ವಿಷಯದ ಬಗ್ಗೆ ಬಾಲಿವುಡ್‌ನ ನಟಿ ರಾಖಿ ಸಾವಂತ್ ಪ್ರತಿಕ್ರಿಯಿಸಿ, ವಿಜಯ್ ಮತ್ತು ತ್ರಿಷಾ ಮದುವೆಯಾಗಬೇಕು. ಅವರ ಮೆಹಂದಿ ಕಾರ್ಯಕ್ರಮಕ್ಕೆ ನಾವು ಹೋಗುತ್ತೇವೆ ಎಂದು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶವವೊಂದರಲ್ಲಿ ಈ ಬಗ್ಗೆ ಮಾತನಾಡಿದ ರಾಖಿ, ತ್ರಿಷಾ ಮತ್ತು ವಿಜಯ್ ಜೋಡಿ ತುಂಬಾ ಚೆನ್ನಾಗಿದೆ. ನಾನು ಮತ್ತು ತ್ರಿಷಾ ಒಟ್ಟಿಗೆ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ಹೋರಾಡುತ್ತಿದ್ದ ದಿನಗಳಿಂದಲೂ ಅವರು ನನಗೆ ಗೊತ್ತು. ಅವರು ಬಾಲಿವುಡ್‌ನಲ್ಲಿದ್ದರು, ನಂತರ ಸೌತ್ ಇಂಡಸ್ಟ್ರಿಗೆ ಹೋದರು. ನನ್ನ ಬಾಲ್ಯದಿಂದಲೂ ನನಗೆ ಅವರು ಗೊತ್ತು ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ವಿಜಯ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಖಿ, ನನಗೆ ವಿಜಯ್ ವೈಯಕ್ತಿಕವಾಗಿ ತುಂಬಾ ಇಷ್ಟ. ಅವರು ತುಂಬಾ ಒಳ್ಳೆಯ ಸ್ವಭಾವದವರು. ಅವರ ಜೊತೆ ಒಂದು ಹಾಡಿನಲ್ಲಿ ನಟಿಸುವುದು ನನ್ನ ಕನಸಾಗಿತ್ತು, ಆದರೆ ಆ ಅವಕಾಶ ಸಿಗಲಿಲ್ಲ. ಈಗ ಅವರ ರಾಜಕೀಯ ಪಕ್ಷ ಸೇರಬೇಕು ಅನಿಸುತ್ತಿದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !