ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಕ್ಷಿತ್ ಶೆಟ್ಟಿ ಮನೆಯ ದೈವ ಕೋಲದಲ್ಲಿ ಭಾಗವಹಿಸಿ ದೈವದ ಆಶೀರ್ವಾದ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಉಡುಪಿಗೆ ರಕ್ಷಿತ್ ತೆರಳಿದ್ದು, ಅಲೆವೂರಿನಲ್ಲಿ ನಡೆದ ದೈವಗಳ ಪುನರ್ ಪ್ರತಿಷ್ಠೆ ಕೋಲದಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಸೈಡ್ ಬಿ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಮುಂದಿನ ಸಿನಿಮಾಗಳಲ್ಲಿಯೂ ಇಂಥದ್ದೇ ಯಶಸ್ಸು ಸಿಗಲಿ ಎಂದು ರಕ್ಷಿತ್ ಬೇಡಿಕೊಂಡಿದ್ದಾರೆ.