ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಸೇರಿ ವಿಶ್ವಾದ್ಯಂತ ಭಕ್ತರು ಭಗವಾನ್ ಶ್ರೀರಾಮನ ಜಪದಲ್ಲಿ ಮುಳುಗಿದ್ದಾರೆ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.
ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರೇ ರಾಮನ ಭಜನೆ ಗೀತೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.ಇದೀಗ ಜರ್ಮನಿಯ ಖ್ಯಾತ ಗಾಯಕಿ ಕೆಸೆಂಡ್ರಾ ಮೇ ಸ್ಪಿಟ್‌ಮನ್ (Cassandra Mae Spittmann) ಅವರು ‘ರಾಮ್ ಆಯೇಂಗೆ’ ಎಂಬ ಭಜನೆಯನ್ನು ಹಾಡುವ ಮೂಲಕ ದೇಶದ ಜನರ ಮನಗೆದ್ದಿದ್ದಾರೆ.
ಅವರು ಹಾಡಿರುವ ವಿಡಿಯೊ (Viral Video) ಈಗ ವೈರಲ್ ಆಗಿದೆ.
#WATCH | Duisburg, Germany | German Singer Cassandra Mae Spittmann sings the devotional song ‘Ram Aayenge’.
Her rendition of the Ram Bhajan has gone viral on social media. pic.twitter.com/tAYYRP9SCW
— ANI (@ANI) January 18, 2024
ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರಿಗೆ ವ್ಯಕ್ತಿಯೊಬ್ಬರು ರಾಮ್ ಆಯೇಂಗೆ ಹಾಡು ಎಂದು ಮನವಿ ಮಾಡಿಕೊಳ್ಳುತ್ತಾರೆ. ಆಗ ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರು ಕೂಡಲೇ, ‘ರಾಮ್ ಆಯೇಂಗೆ’ ಎಂದು ಮಧುರವಾಗಿ ಹಾಡಿದ್ದಾರೆ. ಒಬ್ಬ ವಿದೇಶಿ ಗಾಯಕಿ ಬಾಯಲ್ಲಿ ರಾಮನ ಭಜನೆ ಕೇಳಿದ ಭಾರತೀಯರು ಅವರನ್ನು ಹಾಡಿಹೊಗಳಿದ್ದಾರೆ. ‘ತುಂಬ ಮಧುರವಾಗಿ ಹಾಡಿದ್ದೀರಿ. ನೀವು ಹಿಂದಿಯಲ್ಲಿ ಹಾಡಿದ ಶೈಲಿಯೇ ಅದ್ಭುತವಾಗಿದೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ‘ಎಂಥಾ ಅದ್ಭುತವಾದ ಗಾಯನ. ಇದು ಭಾರತ ಹಾಗೂ ಜರ್ಮನಿ ನಡುವಿನ ಅವಿನಾಭಾವ ಸಂಬಂಧದ ದ್ಯೋತಕ’ ಎಂದು ಬಣ್ಣಿಸಿದ್ದಾರೆ. ಹೀಗೆ ನೂರಾರು ಜನ ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರ ಹಾಡಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರಿಗೂ ಭಾರತದ ಭಜನೆ, ಧಾರ್ಮಿಕ ಗೀತೆಗಳಿಗೂ ಅವಿನಾಭಾವ ಸಂಬಂಧವಿದೆ. ನರೇಂದ್ರ ಮೋದಿ ಅವರೂ ಗಾಂಧಿ ಜಯಂತಿ ದಿನ ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರು ಹಾಡಿದ್ದ ‘ವೈಷ್ಣವ ಜನ ತೋ’ ಹಾಡಿನ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರಲ್ಲೂ, ಕೆಸೆಂಡ್ರಾ ಮೇ ಸ್ಪಿಟ್‌ಮನ್ ಅವರು ಹಿಂದಿಯಲ್ಲಿ ಹಾಡುವ ಹಾಡುಗಳು ಹೆಚ್ಚು ಜನಪ್ರಿಯವಾಗಿವೆ.