ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದಲ್ಲಿ ಮೂರನೇ ತಲೆಮಾರಿನ ಆಗಮನವಾಗಿದೆ. ಮೆಗಾಪವರ್ ಸ್ಟಾರ್ ರಾಮ್ ಚರಣ್ – ಉಪಾಸನಾ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಮಂಗಳವಾರ ಮುಂಜಾನೆ 4ಗಂಟೆಗೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಜುಬಿಲಿ ಹಿಲ್ಸ್ ಅಪೋಲೋ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಮತ್ತು ಮೆಗಾ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಮೆಗಾ ಅಭಿಮಾನಿಗಳು ಅಪೋಲೋ ಆಸ್ಪತ್ರೆಗೆ ತಲುಪಿ ಆಸ್ಪತ್ರೆಯ ಹೊರಗೆ ಸಂಭ್ರಮಿಸಿದ್ದಾರೆ.
ರಾಮ್ ಚರಣ್ – ಉಪಾಸನಾ ಮದುವೆಯಾಗಿ ಹತ್ತು ವರ್ಷಗಳ ಬಳಿಕ ಕುಟುಂಬಕ್ಕೆ ವಾರಸುದಾರಳನ್ನು ಕೊಟ್ಟಿದ್ದಾರೆ. ಕುಟುಂಬದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಆಸ್ಪತ್ರೆಯಲ್ಲಿ, ರಾಮ್ ಚರಣ್, ಮೆಗಾಸ್ಟಾರ್ ಚಿರಂಜೀವಿ ಮತ್ತು ಶ್ರೀಮತಿ ಸುರೇಖಾ ದಂಪತಿ ಈ ಕ್ಷಣಗಳನ್ನು ಬಹಳ ಸಂತೋಷದಿಂದ ಅನುಭವಿಸಿದರು. ಈ ಅದ್ಭುತ ಕ್ಷಣಗಳಿಂದ ಮೆಗಾ ಮನೆ ಮಿಂಚುತ್ತಿದೆ. ಕೊಣಿದೇಲ ಕುಟುಂಬವಷ್ಟೇ ಅಲ್ಲ, ಅಭಿಮಾನಿಗಳೂ ಸಂತಸದಲ್ಲಿ ಮುಳುಗಿದ್ದಾರೆ.. ಈಗಾಗಲೇ ಜಗತ್ತಿನಾದ್ಯಂತ. ಮೆಗಾ ವಾರಸುದಾರಳ ಹೆಸರಲ್ಲಿ ಹಲವು ದೇವಸ್ಥಾನಗಳಲ್ಲಿ ಪೂಜೆ, ಅರ್ಚನೆ ಮಾಡಲು ಮೆಗಾ ಅಭಿಮಾನಿಗಳು ರೆಡಿಯಾಗಿದ್ದಾರೆ. ಮೆಗಾ ಹೀರೋ ರಾಮ್ ಚರಣ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಂಕರ್ ನಿರ್ದೇಶನದಲ್ಲಿ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.