ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪೋಲೋ ಆಸ್ಪತ್ರೆಯ ಸಿಎಸ್‌ಆರ್ ಉಪಾಧ್ಯಕ್ಷೆ, ಯುವರ್ ಲೈಫ್ ಫೌಂಡೇಶನ್ ಸ್ಥಾಪಕಿ ಹಾಗೂ ಚಲನಚಿತ್ರ ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ನೆಹರು ಮೃಗಾಲಯದಲ್ಲಿ ಹುಲಿ ಮರಿಗಳನ್ನು ದತ್ತು ಪಡೆದಿದ್ದಾರೆ.
ಮಗಳು ಕ್ಲಿನ್ ಕಾರಾ ಅವರೊಂದಿಗೆ ಮೃಗಾಲಯಕ್ಕೆ ಆಗಮಿಸಿದ ಉಪಾಸನಾ, ಮೃಗಾಲಯದಲ್ಲಿನ ವಿವಿಧ ಪ್ರಾಣಿಗಳ ಆವರಣಗಳನ್ನು ವೀಕ್ಷಿಸಿದರು.
ಮೃಗಾಲಯ ಉದ್ಯಾನವನದ ನಿರ್ದೇಶಕ ಡಾ. ಸುನಿಲ್ ಎಸ್. ಹಿರೇಮಠ ಅವರನ್ನು ಸಂಪರ್ಕಿಸಿ ಹುಲಿ ಮರಿಗಳನ್ನು ದತ್ತು ಪಡೆದರು. ಹುಲಿ ಮರಿಗಳ ನಿರ್ವಹಣೆಗೆ ಬೇಕಾದ ಹಣವನ್ನು ದೇಣಿಗೆ ಚೆಕ್ ರೂಪದಲ್ಲಿ ಮೃಗಾಲಯದ ನಿರ್ದೇಶಕರಿಗೆ ಹಸ್ತಾಂತರಿಸಲಾಯಿತು.