ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಕಂಪ ಬಂದರೂ, ಪ್ರವಾಹವಾದರೂ ರಾಮಮಂದಿರ ಅಲುಗಾಡೋದಿಲ್ಲ! ಹೌದು, ಭವ್ಯವಾಗಿ ತಲೆಎತ್ತಿರುವ ರಾಮಮಂದಿರ ನಿರ್ಮಾಣ ಹೇಗೆ ಮಾಡಿದ್ದಾರೆ ಗೊತ್ತಾ? ಎಷ್ಟು ವರ್ಷಗಳ ಗ್ಯಾರೆಂಟಿ ಇದೆ ಗೊತ್ತಾ?
70 ಎಕರೆ ಪ್ರದೇಶದಲ್ಲಿರುವ ರಾಮಮಂದಿರ ಸಾವಿರಾರು ವರ್ಷಗಳು ಬಾಳಿಕೆ ಬರಲಿದೆ. 15 ಅಡಿ ಮಣ್ಣನ್ನು ತೆಗೆದು, ಆ ಮಣ್ಣನ್ನು ರೀ ಎಂಜಿನಿಯರಿಂಗ್ ಮಾಡಿ ಮತ್ತೆ ತುಂಬಿಸಲಾಗಿದೆ. ಬಿಸಿಲಿನಲ್ಲಿ ಅಲ್ಲದೇ ರಾತ್ರಿ ವೇಳೆ ಫೌಂಡೇಷನ್ ಮಾಡಲಾಗಿದೆ.
ಅದಕ್ಕಾಗಿ 21 ಅಡಿ ದಪ್ಪದ ಗ್ರಾನೇಟ್ ಬಳಸಲಾಗಿದೆ. ಕೆಮಿಕಲ್‌ಗಳನ್ನು ಬಳಿಸ ಒಟ್ಟಾರೆ 56 ಲೇಯರ್‌ಗಳಿಂದ ರಾಮಮಂದಿರ ನಿರ್ಮಾಣವಾಗಿದೆ. ವಿಶೇಷವಾದ ಕಾಂಟ್ರಿಟ್ ಹಾಕಲಾಗಿದೆ. ನಾಗರ ಶೈಲಿಯಿಂದ ಸ್ಫೂರ್ಥಿ ಪಡೆದಿರುವ ಮಂದಿರದಲ್ಲಿ ಒಟ್ಟಾರೆ 360 ಪಿಲ್ಲರ್‌ಗಳಿವೆ.