CINEMA| ಆದಿಪುರುಷ್ ಚಿತ್ರದಿಂದ ಮತ್ತೊಂದು ಹಾಡು ಔಟ್..ರಾಮ ಸೀತಾ ರಾಮ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್…ಆದಿಪುರುಷ್ ಸಿನಿಮಾ‌ ಬರಲಿದೆ. ಇನ್ನು ಈ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಪ್ರಚಾರದಲ್ಲಿ ವೇಗ ಹೆಚ್ಚಿಸಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿರುವ ನಿರ್ಮಾಪಕರು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ಜೈ ಶ್ರೀರಾಮ್ ಹಾಡು ಬಿಡುಗಡೆಯಾಗಿ ಸೂಪರ್ ಹಿಟ್ ಕೂಡ ಆಗಿತ್ತು. ಇತ್ತೀಚೆಗೆ ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ.

ರಾಮ್ ಸೀತಾ ರಾಮ್ ಎಂಬ ಶೀರ್ಷಿಕೆಯ ಹಾಡಿಗೆ ರಾಮಜೋಗಯ್ಯ ಶಾಸ್ತ್ರಿ ಅವರು ತೆಲುಗು ಸಾಹಿತ್ಯವನ್ನು ನೀಡಿದ್ದಾರೆ. ಈ ಹಾಡು ಕೂಡ ಆಕರ್ಷಕವಾಗಿದೆ. ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಜೂನ್ 6 ರಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ತಿರುಪತಿಯಲ್ಲಿ ಅದ್ಧೂರಿಯಾಗಿ ಯೋಜಿಸಲಾಗಿತ್ತು. ಈ ಹಿಂದೆ ಬಾಹುಬಲಿ ಪ್ರೀ ರಿಲೀಸ್ ಈವೆಂಟ್ ನಡೆದು ಬ್ಲಾಕ್ ಬಸ್ಟರ್ ಆಗಿತ್ತು. ಈಗ ಅದೇ ಟ್ರೆಂಡ್ ಆದಿಪುರುಷನಿಗೂ ವರ್ಕೌಟ್ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಯುವಿ ಕ್ರಿಯೇಷನ್ಸ್ ಈ ಸಿನಿಮಾವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲು ಹೊರಟಿದೆ.

ಇದರ ಹಕ್ಕುಗಳನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಪಡೆದುಕೊಂಡಿದೆ ಎಂಬ ವರದಿಗಳಿವೆ. ಎರಡು ತೆಲುಗು ರಾಜ್ಯಗಳ ಥಿಯೇಟ್ರಿಕಲ್ ರೈಟ್ಸ್ ಅನ್ನು ಪೀಪಲ್ ಮೀಡಿಯಾ 170 ಕೋಟಿಗೆ ಖರೀದಿಸಿದೆ ಎಂದು ತಿಳಿದಿದೆ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಈ ಚಿತ್ರವನ್ನು ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶಿಸಿದ್ದಾರೆ. ಟಿ ಸೀರೀಸ್ ಮತ್ತು ರೆಟ್ರೋಫೈಲ್ಸ್ ಜಂಟಿಯಾಗಿ ಈ ಚಿತ್ರವನ್ನು 600 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿವೆ. ಚಿತ್ರ ಜೂನ್ 16 ರಂದು ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!