ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ಅಲ್ಲೇ ಇರುತ್ತೆ. ರಾಮನೂ ಅಲ್ಲೇ ಇರ್ತಾನೆ. ರಾಮನಗರ ಹೆಸರು ಬದಲಾವಣೆ ರಾಜಕೀಯ ವಿಚಾರವಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಉತ್ತರಿಸಿದರು. ರಾಮನಗರ ಅಲ್ಲೇ ಇರುತ್ತೆ ಎಲ್ಲಿಯೂ ಹೋಗಲ್ಲ. ರಾಮನೂ ಅಲ್ಲೇ ಇರ್ತಾನೆ ಎಂದರು. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಏನನ್ನೂ ಮಾಡಲು ಸಾಧ್ಯವಿಲ್ಲ. ಇದೆಲ್ಲವನ್ನೂ ಸರ್ಕಾರ ನಿಭಾಯಿಸಬೇಕು. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಸರ್ಕಾರ ಮರುನಾಮಕರಣ ಮಾಡ್ತಿದೆ. ಇದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.